ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವುದರಿಂದ ಕೀಲು ನೋವು, ಊತ ಮತ್ತು ನಡೆದಾಡಲು ಕಷ್ಟವಾಗುವ ಪರಿಸ್ಥಿತಿ ಕೂಡಾ ಎದುರಾಗುತ್ತದೆ. ಯೂರಿಕ್ ಆಸಿಡ್ ನಿಯಂತ್ರಿಸುವುದರಲ್ಲಿ, ಕೆಲವು ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಅಂಜೂರದ ಹಣ್ಣುಗಳು ಅತ್ಯಂತ ಪ್ರಯೋಜನಕಾರಿ. ಅಂಜೂರದ ಹಣ್ಣುಗಳನ್ನು ಸೇವಿಸುವ ಮೂಲಕ ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ಹೋಗುವುದು.
ಅಂಜೂರದ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಂಜೂರದಲ್ಲಿ ಜೀವಸತ್ವಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಒಳಗೊಂಡಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ಹೆಚ್ಚಿದ ಟಾಕ್ಸಿನ್‌ಗಳು ಮತ್ತು ಪ್ಯೂರಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಇದರ ನಿಯಮಿತ ಸೇವನೆಯಿಂದ ಕಿಡ್ನಿ ಸ್ಟೋನ್ ಸ್ಟೋನ್ ಕೂಡಾ ಒಡೆಯುವುದು.ಹೀಗೆ ಕಿಡ್ನಿ ಸ್ಟೋನ್ ಕರಗುವ ಮೂಲಕ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುವುದು.
2-3 ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಅಂಜೂರದ ಹಣ್ಣುಗಳನ್ನು ನೆನೆಸಿದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.