ಶೂಟಿಂಗ್ ವೇಳೆ ಬ್ರಾ ಧರಿಸಲ್ಲ ಅಂತ ಹಠ ಮಾಡಿದ ಖ್ಯಾತ ನಟಿ! ಪೇಚಿಗೆ ಸಿಲುಕಿದ ನಿರ್ದೇಶಕ ಮಾಡಿದ್ದು ಹೀಗೆ…
ಹಿಂದಿ ಚಿತ್ರರಂಗದ ಹಿರಿಯ ಚಿತ್ರ ನಿರ್ಮಾಪಕ ಮತ್ತು ಕಲಾವಿದ ಟಿನು ಆನಂದ್, ಮಾಧುರಿ ದೀಕ್ಷಿತ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಟಿನು ಹೇಳುವಂತೆ, ಅವರ ಚಿತ್ರವೊಂದರಲ್ಲಿ ಬ್ರಾ ಧರಿಸಿದ ದೃಶ್ಯವನ್ನು ಚಿತ್ರೀಕರಿಸಬೇಕಿದೆ, ಅದೇ ರೀತಿ ಬಟ್ಟೆ ಧರಿಸುವಂತೆ ಮಾಧುರಿಯನ್ನು ಕೇಳಿದ್ದರಂರೆ. ಆದರೆ ಅದಕ್ಕೆ ಮಾಧುರಿ ಒಪ್ಪಿಗೆಯನ್ನು ನೀಡಲಿಲ್ಲ, ಈ ಕಾರಣದಿಂದಾಗಿ ನಿರ್ದೇಶಕರು ಮಾಧುರಿ ಅವರನ್ನು ಆ ಚಿತ್ರದಿಂದ ಹೊರಗಿಟ್ಟಿದ್ದರು.
ಇತ್ತೀಚೆಗೆ, ಟಿನು ಆನಂದ್ ಅವರು ರೇಡಿಯೊ ನಶಾಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. "1989 ರಲ್ಲಿ, ನಾನು ಅಮಿತಾಬ್ ಬಚ್ಚನ್ ಅವರೊಂದಿಗೆ ಶಾನಖ್ತ್ ಚಿತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದೆವು. ಈ ಚಿತ್ರದ ಒಂದು ದೃಶ್ಯದಲ್ಲಿ, ಮಾಧುರಿ ತನ್ನ ಕುಪ್ಪಸವನ್ನು ತೆರೆದು ಬ್ರಾ ತೋರಿಸುವಂತೆ ನಟಿಸುವಂತೆ ಹೇಳಿದೆವು”.
“ಶೂಟಿಂಗ್’ಗೂ ಮುನ್ನ ಮಾಧುರಿಗೆ ಸಂಪೂರ್ಣ ಸೀಕ್ವೆನ್ಸ್ ವಿವರಿಸಿದ್ದೆ ಮತ್ತು ಮೊದಲ ದಿನವೇ ಚಿತ್ರೀಕರಣ ಮಾಡಬೇಕೆಂದುಕೊಂಡಿದ್ದೆ. ಮೊದಮೊದಲು ಮಾಧುರಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಶೂಟಿಂಗ್ ದಿನ ಬಂದಾಗ ಮಾಧುರಿ ದೀಕ್ಷಿತ್ 1 ಗಂಟೆ ಮೇಕಪ್ ರೂಮ್ ನಿಂದ ಹೊರಗೆ ಬರಲಿಲ್ಲ” ಎಂದು ಹೇಳಿದ್ದಾರೆ.
“ಇದಾದ ನಂತರ ನಾನು ಒಳಗೆ ಹೋಗಿ ನೋಡಿದಾಗ ಅವಳು ಸಿದ್ಧವಾಗಿರಲಿಲ್ಲ. ನಾನು ಆಕೆಯನ್ನು ಕೇಳಿದೆ, ಆಗ ಆಕೆ ಆ ದೃಶ್ಯದ ಬಗ್ಗೆ ನಿರಾಕರಿಸಿದಳು. ಹೀಗಾಗಿ ಶೂಟಿಂಗ್ ಸ್ಪಾಟ್ ಬಿಟ್ಟು ಅಲ್ಲಿಂದ ಹೊರಡುವಂತೆ ಹೇಳಿದೆ. ಚಿತ್ರದ ಸ್ಕ್ರಿಪ್ಟ್ ಪ್ರಕಾರ ಆ ದೃಶ್ಯ ಬಹಳ ಮುಖ್ಯವಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಜೊತೆ ಬ್ರಾದಲ್ಲಿ ದೃಶ್ಯಗಳನ್ನು ಶೂಟಿಂಗ್ ಮಾಡದ ಕಾರಣದಿಂದ ಮಾಧುರಿ ದೀಕ್ಷಿತ್ ಅವರನ್ನು ಆ ಸಿನಿಮಾದಿಂದ ತೆಗೆದುಹಾಕಲಾಯಿತು ಎಂದು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ನಂತರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಅಮಿತಾಬ್ ಬಚ್ಚನ್, ಅವರು ಸಿದ್ಧವಿಲ್ಲದಿದ್ದರೆ ಹೋಗಲಿ ಎಂದು ಹೇಳಿದ್ದರಂತೆ. ಕಡೆಗೆ ಮಾಧುರಿ ಈ ದೃಶ್ಯಕ್ಕೆ ಒಪ್ಪಿಕೊಂಡರೂ ಕೂಡ, ಟಿನು ಆನಂದ್ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಸಾಧ್ಯವಾಗಲಿಲ್ಲ.