ಬಿಗ್ ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಟಾಪ್ 5 ಸ್ಪರ್ಧಿಗಳು ಇವರೇ ! ಗೆಲ್ಲುವ ಕುದುರೆ ಯಾರು ?

Wed, 03 Jan 2024-2:03 pm,

ಭಾರೀ ಸುದ್ದಿ ಮಾಡಿರುವ ಕನ್ನಡ ಬಿಗ್ ಬಾಸ್ ಇನ್ನೇನು ನಾಲ್ಕು ವಾರಗಳಲ್ಲಿ ಮುಕ್ತಾಯವಾಗಲಿದೆ. ಈ ಸೀಸನ್ ನ ಫಿನಾಲೆ ಜನವರಿ ತಿಂಗಳಲ್ಲಿ 27, 28ರಂದು  'ಬಿಗ್ ಬಾಸ್ ಕನ್ನಡ 10' ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.   

ಈ ಬಾರಿ ಗೆದ್ದವರಿಗೆ  ನಗದು ಬಹುಮಾನದ ಜೊತೆಗೆ ಒಂದು ಕಾರು, ಸ್ಕೂಟಿ ಬಹುಮಾನವಾಗಿ ಸಿಗುವುದು. ಈ ಬಾರಿ ರನ್ನರ್ ಅಪ್ ಆದವರಿಗೂ ಸ್ಕೂಟಿ ಸಿಗಲಿದೆ. 

ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು  9 ಸ್ಪರ್ಧಿಗಳು. ಈ ಪೈಕಿ ಐವರು ಫಿನಾಲೆಗೆ ತಲುಪುತ್ತಾರೆ. ಈ ವಾರ ವಿನಯ್ ಗೌಡ, ನಮ್ರತಾ, ಸಂಗೀತಾ ನಾಮಿನೇಶನ್‌ನಿಂದ ಸೇಫ್ ಆಗಿದ್ದಾರೆ. 

ಕಾರ್ತಿಕ್, ಡ್ರೋನ್, ವರ್ತುರ್ ಗೆ ದೊಡ್ಡ  ಮಟ್ಟದ ಅಭಿಮಾನ ಬಳಗವಿದೆ. ಇನ್ನು ಮೈಕಲ್ ಪ್ರತಿ ವಾರ ನಾಮಿನೇಷನ್ ಗೆ ಹೋಗುತ್ತಿದ್ದರೂ ಎಲಿಮಿನೇಶನ್ ನಿಂದ ಸೇವ್ ಆಗುತ್ತಲೇ ಬಂದಿದ್ದಾರೆ. ಈ ಬಾರಿ ಕೂಡಾ ಮೈಕಲ್ ನಾಮಿನೇಟ್ ಆಗಿದ್ದಾರೆ. 

ಕಾರ್ತಿಕ್, ವಿನಯ್ ಗೌಡ, ಸಂಗೀತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತನಿಷಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಇವರಿಗೆ ಮನೆಯ ಹೊರಗೆ ಕೂಡಾ ಅಭಿಮಾನಿಗಳ ಬೆಂಬಲವಿದೆ. ಹಾಗಾಗಿ ಇವರೇ ಫಿನಾಲೆ ತಲುಪಲಿದ್ದಾರೆ  ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದುಮಾಡುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link