ಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದು

Mon, 21 Oct 2024-8:43 am,

ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು. 

ಗಜಕೇಸರಿ ಯೋಗದ ಕಾರಣ ಅನೇಕ ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ.  ಜೀವನದ  ಭೌತಿಕ ಸುಖವನ್ನು ಅನುಭವಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ಇವರಿಗೆ ಅದೃಷ್ಟ ಒಲಿದು ಬರುವುದು.  

ಮೇಷ ರಾಶಿ : ಈ ರಾಶಿಯವರ ಸಂಪತ್ತಿನ ಮನೆಯಲ್ಲಿಯೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರ ಮೇಲೆ ಸಂಪತ್ತಿನ ಅಧಿದೇವತೆಯ  ವಿಶೇಷ ಆಶೀರ್ವಾದ ಇರಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗುವುದು.  ಹಣಕಾಸಿನ ಕೊರತೆ ಸಂಪೂರ್ಣವಾಗಿ ನೀಗುವುದು. 

ತುಲಾ ರಾಶಿ :ಈ ರಾಶಿಯವರ ಅದೃಷ್ಟದ ದಿನಗಳು ಆರಂಭ. ವಿದೇಶ ಪ್ರಯಾಣಕ್ಕೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗುವುದು.  ವಿದೇಶದಲ್ಲಿ ಉತ್ತಮ ಉದ್ಯೋಗ ಸಿಗುವುದು. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕಳೆಯುವುದು. ಭಾಗ್ಯದ ಬಾಗಿಲು ತೆರೆದುಕೊಳ್ಳುವುದು. 

ಕನ್ಯಾ ರಾಶಿ :ಇವರ ಅದೃಷ್ಟದ ಮನೆಯಲ್ಲಿಯೇ ಗಜಕೇಸರಿ ಯೋಗ ನಿರ್ಮಾಣ. ಜೀವನದಲ್ಲಿ ಸಂತಸದ ಹೊನಲು ಹರಿಯುವುದು. ಯಶಸ್ಸಿನ ಏಣಿ ಏರುತ್ತಲೇ ಹೋಗುವಿರಿ.  ವಾಹನ, ಆಸ್ತಿ  ಖರೀದಿಸುವ ಕಾಲ ಇದು. ಆರೋಗ್ಯವೂ ಚೆನ್ನಾಗಿರುತ್ತದೆ.    

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link