ವರ್ಷದ ಪ್ರಥಮ ಹಬ್ಬ ಮಕರ ಸಂಕ್ರಾಂತಿ: ಈ 5 ರಾಶಿಗೆ ತರಲಿದೆ ಸುಖದ ಸುಪ್ಪತ್ತಿಗೆ.. ಇನ್ಮುಂದೆ ಕಷ್ಟ-ಚಿಂತೆ ಎಲ್ಲವೂ ದೂರ ದೂರ!

Mon, 15 Jan 2024-4:57 am,

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಇದು ಹಿಂದೂಗಳ ಪ್ರಮುಖ ಹಬ್ಬವಾಗಿದೆ.

ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯ ಹಬ್ಬವು ಕೆಲವು ರಾಶಿಗಳಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತಿದ್ದು, ಅಂತಹ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

ಮೇಷ ರಾಶಿ- ಸೂರ್ಯನು ಮಕರ ರಾಶಿಗೆ ಬರುವುದರಿಂದ ಮೇಷ ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳು ಸಿಗುತ್ತವೆ. ವೃತ್ತಿಜೀವನದಲ್ಲಿ ಶ್ರಮದ ಫಲವನ್ನು ಖಂಡಿತವಾಗಿಯೂ ಪಡೆಯುತ್ತೀರಿ. ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವಿರಿ.

ಮಿಥುನ- ಮಿಥುನ ರಾಶಿಯ ಜನರು ಸೂರ್ಯನ ಸಂಚಾರದಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ರಾಶಿಯ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.

ಕರ್ಕ ರಾಶಿ- ಸೂರ್ಯನ ಸಂಚಾರವು ಕರ್ಕಾಟಕ ರಾಶಿಯವರ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಹೊಂದಾಣಿಕೆಯು ಮೊದಲಿಗಿಂತ ಬಲವಾಗಿರುತ್ತದೆ. ಐಷಾರಾಮಿ ಯೋಗ ಪಡೆಯುವ ಸಾಧ್ಯತೆಯಿದೆ.

ಧನು ರಾಶಿ - ಸೂರ್ಯನ ಸಂಚಾರದಿಂದ ಈ ರಾಶಿಯವರು ಸಂಪತ್ತನ್ನು ಹೆಚ್ಚಿಸಲು ಅನೇಕ ಮಾರ್ಗಗಳನ್ನು ಪಡೆಯುತ್ತೀರಿ. ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಬಹುದು. ಈ ರಾಶಿಯ ಜನರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ.

ಮೀನ ರಾಶಿ- ಸೂರ್ಯನ ಸಂಚಾರದಿಂದ ಮೀನ ರಾಶಿಯವರಿಗೆ ಉತ್ತಮ ಆದಾಯ ದೊರೆಯುತ್ತದೆ. ಬಹುಕಾಲದಿಂದ ಅಂದುಕೊಂಡ ಕೆಲ ಆಸೆಗಳು ಸಹ ಈಡೇರುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link