Chandra Grahan: ಈ ರಾಶಿಯವರ ವೃತ್ತಿ ಜೀವನದಲ್ಲಿ ಭಾರೀ ಯಶಸ್ಸು ಕರುಣಿಸಲಿದೆ ವರ್ಷದ ಮೊದಲ ಚಂದ್ರಗ್ರಹಣ

Wed, 03 May 2023-10:41 am,

05 ಮೇ 2023ರಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇದೇ ದಿನ ಬುದ್ಧ ಪೂರ್ಣಿಮೆ ಕೂಡ ಇರಲಿದೆ.  139 ವರ್ಷಗಳ ಬಳಿಕ ಬುದ್ಧ ಪೂರ್ಣಿಮೆಯಂದು ಚಂದ್ರ ಗ್ರಹಣ ಸಂಭವಿಸುತ್ತಿದ್ದು, ಜ್ಯೋತಿಷ್ಯದ ದೃಷ್ಟಿಯಿಂದ ಇದಕ್ಕೆ ಬಹಳ ಮಹತ್ವವಿದೆ. ಭಾರತದಲ್ಲಿ ಚಂದ್ರ ಗ್ರಹಣ ಗೋಚರಿಸುವುದಿಲ್ಲ. ಹಾಗಾಗಿ, ಇದರ ಸೂತಕದ ಅವಧಿಯೂ ಮಾನ್ಯವಾಗಿರುವುದಿಲ್ಲ. ಆದರೆ, ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಅದರಲ್ಲೂ ನಾಲ್ಕು ರಾಶಿಯವರಿಗೆ ಇದನ್ನು ಗೋಲ್ಡನ್ ಟೈಮ್ ಎಂದು ಬಣ್ಣಿಸಲಾಗುತ್ತಿದೆ.  ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

ವರ್ಷದ ಮೊದಲ ಚಂದ್ರ ಗ್ರಹಣವು ಮಿಥುನ ರಾಶಿಯವರಿಗೆ ಕೆಲವು ಗುಡ್ ನ್ಯೂಸ್ ನೀಡಲಿದೆ. ಈ ಸಮಯದಲ್ಲಿ ನಿಮಗೆ ಪ್ರಮೋಷನ್ ದೊರೆಯುವ ಸಾಧ್ಯತೆ ಇದ್ದು ಆರ್ಥಿಕ ಸ್ಥಿತಿಯೂ ಬಲಗೊಳ್ಳಲಿದೆ. 

ಬುದ್ಧ ಪೂರ್ಣಿಮೆಯ ದಿನ ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರ ಗ್ರಹಣವು ಸಿಂಹ ರಾಶಿಯವರ ಆರ್ಥಿಕ ಭಾಗವನ್ನು ಬಲಗೊಳಿಸಲಿದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು ವೃತ್ತಿ ಬದುಕಿನಲ್ಲೂ ಉತ್ತುಂಗದ ಶಿಖರವನ್ನು ಏರುವಿರಿ. 

ಈ ವರ್ಷದ ಮೊದಲ ಚಂದ್ರ ಗ್ರಹಣವು ಕನ್ಯಾ ರಾಶಿಯವರ ಜೀವನವನ್ನೂ ಕೂಡ ಹೊಳೆಯುವಂತೆ ಮಾಡಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯ ಬ್ಯುಸಿನೆಸ್ ಮ್ಯಾನ್ ಗಳು ಬಂಪರ್ ಲಾಭವನ್ನು ಗಳಿಸಲಿದ್ದಾರೆ. ಮಾತ್ರವಲ್ಲ, ಇಷ್ಟು ದಿನಗಳ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತರಾಗಲಿದ್ದಾರೆ. 

ಇನ್ನೆರಡು ದಿನಗಳಲ್ಲಿ ಸಂಭವಿಸಲಿರುವ ವರ್ಷದ ಮೊದಲ ಚಂದ್ರ ಗ್ರಹಣವು ಮಕರ ರಾಶಿಯವರಿಗೂ ಸಹ ಮಂಗಳಕರ ಫಲಗಳನ್ನು ತರಲಿದೆ. ಒಂದರ್ಥದಲ್ಲಿ ಇವರಿಗೆ ಈ ಸಮಯವನ್ನು ಸುವರ್ಣ ಸಮಯ ಎಂತಲೇ ಬಣ್ಣಿಸಲಾಗುತ್ತಿದೆ. ಚಂದ್ರ ಗ್ರಹಣದ ಶುಭ ಪರಿಣಾಮದಿಂದಾಗಿ ಈ ರಾಶಿಯವರು ವೃತ್ತಿಯಲ್ಲಿ ಯಶಸ್ಸು, ಕೌಟುಂಬ ಜೀವನದಲ್ಲಿ ಸುಖ ಸಂತೋಷವನ್ನು ಅನುಭವಿಸುವಿರಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link