PHOTOS: 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲು ಮತ ಹಾಕಿದವರು ಯಾರು?
ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಟ್ರಾನ್ರ್ಸ್‍ಮಿಟೆಡ್ ಪೋಸ್ಟಲ್ ಅಂಚೆ ಮತದಾನ (ಇಟಿಪಿಬಿಎಸ್) ವಿಧಾನದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ 1 ಲಕ್ಷದ 34 ಸಾವಿರಕ್ಕೂ ಹೆಚ್ಚು ಜವಾನ್ ಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶಸಿಕ್ಕಂತಾಗಿದೆ.
ಸ್ಪೀಡ್ ಪೋಸ್ಟ್ ಮೂಲಕ ಈ ಮತಗಳನ್ನು ರಾಷ್ಟ್ರದ ವಿವಿಧ ಲೋಕಸಭಾ ಕ್ಷೇತ್ರಗಳ ಅನೇಕ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಮತ್ತು ಈ ಮತಗಳನ್ನು ಕೂಡ ಎಣಿಕೆಗೆ ಪರಿಗಣಿಸಲಾಗುವುದು.
30 ಲಕ್ಷಕ್ಕೂ ಅಧಿಕ ಸೇವಾ ಮತದಾರರು ಈ ವರ್ಷದ ಪೋಸ್ಟಲ್ ಮತದಾನ ಮೂಲಕ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.
ರಾಜೀವ್ ಚಂದ್ರಶೇಖರ್ ಅವರ ಅರ್ಜಿಯನ್ನು ಕೇಳಿದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೈನಿಕರ ಬಗೆಗೆ ಮಹತ್ವದ ನಿರ್ಣಯವನ್ನು ನೀಡಿದೆ. ಅದರಲ್ಲಿ ನ್ಯಾಯಾಲಯವು ದೇಶದ ನಿಯೋಜಿತ ಪ್ರದೇಶಗಳ ಸೈನಿಕರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿದೆ.
Pics Courtesy: ANI