Fitness Tips: ವ್ಯಾಯಾಮ ಮಾಡದಿದ್ರೆ ನಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ..?
ನಿಯಮಿತವಾಗಿ ಚುರುಕಾದ ವ್ಯಾಯಾಮ ಮಾಡುವುದರಿಂದ ವಯಸ್ಸಾಗುವಿಕೆ ಸಮಸ್ಯೆ ಬರುವುದಿಲ್ಲ. ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೋಡಗಿಕೊಂಡರೆ ನೀವು ಅಕಾಲಿಕ ಮರಣದ ಅಪಾಯದಿಂದ ಪಾರಾಬಹುದು. ವ್ಯಾಯಾಮ ಮಾಡದಿದ್ದರೆ ನಿಮಗೆ ಖಂಡಿತ ಸಮಸ್ಯೆಗಳು ಎದುರಾಗುತ್ತವೆ.
ನಮ್ಮ ದೇಹಕ್ಕೆ ಯಾವುದೇ ರೀತಿಯ ಚಟುವಟಿಕೆ ನೀಡದಿದ್ದರೆ ಹೆಚ್ಚು ಹಾನಿಗೆ ಒಳಗಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ, ದೇಹಕ್ಕೆ ಯಾವುದೇ ರೀತಿಯ ಚಟುವಟಿಕೆ ನೀಡದಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಮಾನವನ ದೇಹಕ್ಕೆ ಹೃದಯ ಅತ್ಯಂತ ಮುಖ್ಯವಾದ ಅಂಗ. ಇಡೀ ದೇಹಕ್ಕೆ ರಕ್ತವನ್ನು ಪಂಪು ಮಾಡುವ ಕೆಲಸವನ್ನು ಹೃದಯ ಮಾಡುತ್ತದೆ. ಏರೋಬಿಕ್ ಮತ್ತು ಕಾರ್ಡಿಯೋ ವ್ಯಾಯಾಮಗಳು ಉತ್ತಮ ಹೃದಯ ಬಡಿತ ಮತ್ತು ಹೃದಯದ ಕಾಯಿಲೆಗಳ ಅಪಾಯಕ್ಕೆ ಸಂಬಂಧಿಸಿದೆ. ನೀವು ಯಾವುದೇ ರೀತಿಯ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡದಿದ್ದರೆ ನಿಮ್ಮ ಹೃದಯ ಕಾರ್ಯನಿರ್ವಹಿಸುವುದನ್ನೆ ನಿಲ್ಲಿಸಬಹುದು.
ವ್ಯಾಯಾಮ ಮಾಡದಿದ್ದರೆ ನಿಮ್ಮ ಹೃದಯದ ಬಡಿತವು ತೊಂದರೆಗೊಳಗಾದಬಹುದು, ಇದು ನಿಮ್ಮ ಉಸಿರಾಟದ ಮೇಲೂ ಪರಿಣಾಮ ಬೀರಬಹುದು. ಕಳಪೆ ಆಹಾರದ ಸೇವನೆ ಹೆಚ್ಚಿನ ಹೃದಯ ಸಮಸ್ಯೆಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ನಾವು ಆರೋಗ್ಯವಾಗಿರಬೇಕಾದ್ರೆ ನಮ್ಮ ದೇಹದಲ್ಲಿರುವ ಸ್ನಾಯು ಕೋಶಗಳನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯ. ಇವುಗಳನ್ನು ಬಲಪಡಿಸುವಲ್ಲಿ ವ್ಯಾಯಾಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೀವು ವ್ಯಾಯಾಮ ಮಾಡದಿದ್ದಾಗ ಅಥವಾ ಯಾವುದೇ ರೀತಿಯ ದೈಹಿಕ ಚಟುವಟಿಕೆ ನಡೆಸದಿದ್ದಾಗ ದೇಹದಲ್ಲಿರುವ ಸ್ನಾಯುಬಲ ಕಡಿಮೆಯಾಗುತ್ತದೆ. ಇದು ನಿಮ್ಮನ್ನು ತುಂಬಾ ದುರ್ಬಲರನ್ನಾಗಿ ಮಾಡುತ್ತದೆ.