ಜೀರ್ಣ ಕ್ರಿಯೆ ಚುರುಕುಗೊಳಿಸುತ್ತದೆ ಈ ಐದು ಆಹಾರ , ಉದರದ ಸಮಸ್ಯೆ ಎದುರಾಗುವುದೇ ಇಲ್ಲ

Thu, 04 Aug 2022-11:43 am,

ಜೀರ್ಣಕ್ರಿಯೆಯ ಸಮಸ್ಯೆಯಿಂದಾಗಿ, ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಡಬಹುದು. ಉತ್ತಮ ಜೀರ್ಣಕ್ರಿಯೆಗಾಗಿ, ಸಮತೋಲಿತ ಆಹಾರವನ್ನು ಸೇವಿಸಬೇಕು. ಜೀರ್ಣ ಕ್ರಿಯೆಯನ್ನು ಸುಧಾರಿಸಬೇಕಾದರೆ ಕೆಲವು ಆಹಾರಗಳನ್ನು ಸೇವಿಸಬೇಕು. 

ಬೆಚ್ಚಗಿನ ನೀರಿನೊಂದಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ಯು ಜೀರ್ಣಕ್ರಿಯೆ ಚುರುಕಾಗುತ್ತದೆ. ಮಾತ್ರವಲ್ಲ ಇದು  ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. 

ಆರೋಗ್ಯಕರ ದಿನವನ್ನು  ಆರಂಭಿಸಲು ಪಪ್ಪಾಯ ಅತ್ಯುತ್ತಮ ಆಹಾರವಾಗಿದೆ. ಬೆಳಗಿನ ಉಪಾಹಾರದಲ್ಲಿ ಈ ಹಣ್ಣನ್ನು ಸೇವಿಸುವುದರಿಂದ ದಿನವಿಡೀ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.  ಈ ಹಣ್ಣು ಪಪೈನ್ ಎಂಬ ಜೀರ್ಣಕಾರಿ ಕಿಣ್ವವನ್ನು ಹೊಂದಿರುತ್ತದೆ

ಆಪಲ್ ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.  ಈ ಹಣ್ಣು ವಿಟಮಿನ್ ಎ, ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಅನೇಕ ಖನಿಜಗಳು ಮತ್ತು ಪೊಟ್ಯಾಸಿಯಮ್  ಇರುತ್ತದೆ. ಇದರಲ್ಲಿರುವ ನಾರಿನಂಶದಿಂದಾಗಿ ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ.

ಸೌತೆಕಾಯಿಯಲ್ಲಿ ಎರೆಪ್ಸಿನ್ ಎಂಬ ಕಿಣ್ವವಿದೆ.  ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಆಮ್ಲೀಯತೆ, ಜಠರದುರಿ ಮತ್ತು ಜಠರ ಹುಣ್ಣುಗಳಿಂದ ಉಪಶಮನ ನೀಡುತ್ತದೆ. 

ಜೀರ್ಣಕ್ರಿಯೆಯನ್ನು ಸರಿಯಾಗಿ ಇರಿಸಿಕೊಳ್ಳಲು ಬಾಳೆಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link