30ವರ್ಷ ದಾಟಿದ ಬಳಿಕ ನಿಮ್ಮ ಡಯಟ್ನಲ್ಲಿ ಇರಲೇಬೇಕು ಈ ಆಹಾರಗಳು
ಆರೋಗ್ಯ ತಜ್ಞರ ಪ್ರಕಾರ, ಯಾವುದೇ ವ್ಯಕ್ತಿ 30 ವರ್ಷ ದಾಟಿದ ಬಳಿಕ ತಮ್ಮ ಆಹಾರಪದ್ದತಿಯ ಬಗ್ಗೆ ವಿಶೇಷ ಗಮನವಹಿಸಬೇಕು. ಅದರಲ್ಲೂ, 30ರ ಬಳಿಕ ನಮ್ಮ ಡಯಟ್ನಲ್ಲಿ ಕೆಲವು ಆಹಾರಗಳು ಇರಲೇಬೇಕು ಎಂದು ಹೇಳಲಾಗುತ್ತದೆ. ಅಂತಹ ಐದು ಪ್ರಮುಖ ಆಹಾರಗಳು ಯಾವುವು ಎಂದು ತಿಳಿಯೋಣ...
ಬ್ರೊಕೊಲಿ: ಬ್ರೊಕೊಲಿಯಲ್ಲಿ ಪ್ರೊಟೀನ್, ಸತು, ನಾರಿನಂಶ, ವಿಟಮಿನ್-ಎ, ವಿಟಮಿನ್-ಸಿ ಸೇರಿದಂತೆ ಹಲವು ಪೋಷಕಾಂಶಗಳಿದ್ದು ಇದು ನಮ್ಮನ್ನು ಹಲವು ರೋಗಗಳಿಂದ ರಕ್ಷಿಸಿ, ದೇಹವನ್ನು ಫಿಟ್ ಆಗಿರಿಸಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ನಟ್ಸ್: ನಟ್ಸ್ ಗಳು ಹೆಚ್ಚಿನ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಹಾಗಾಗಿ, ನಿತ್ಯ ನಮ್ಮ ಆಹಾರದಲ್ಲಿ ನಟ್ಸ್ ಸೇವಿಸುವುದರಿಂದ ಇದು ನಮ್ಮನ್ನು ಸದೃಢವಾಗಿರಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಜೇನುತುಪ್ಪ: ಆಂಟಿಸೆಪ್ಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಲ್ಲಿ ಸಮೃದ್ಧವಾಗಿರುವ ಜೇನುತುಪ್ಪ ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡಲು ಪ್ರಯೋಜನಕಾರಿಯಾಗಿದೆ.
ಚಿಯಾ ಸೀಡ್ಸ್: ಸಾಮಾನ್ಯವಾಗಿ ತೂಕ ಇಳಿಕೆಗಾಗಿ ಹೆಚ್ಚಾಗಿ ಬಳಸಲ್ಪಡುವ ಚಿಯಾಸೀಡ್ಸ್ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಮೆಗ್ನೀಸಿಯಮ್ ನಲ್ಲಿ ಸಮೃದ್ಧವಾಗಿದ್ದು ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಬೆಳ್ಳುಳ್ಳಿ ಸೇವನೆಯು ದೇಹದಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದಾಗಿ ನಾವು ಕೆಲವು ರೋಗಗಳಿಂದ ಅಂತರ ಕಾಯ್ದುಕೊಳ್ಳಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.