ಒಬ್ಬರಲ್ಲ, ಇಬ್ಬರಲ್ಲ… ಟೀಂ ಇಂಡಿಯಾದ ಐವರು ಸ್ಟಾರ್ ಕ್ರಿಕೆಟಿಗರಿಂದ ಏಕಕಾಲಕ್ಕೆ ನಿವೃತ್ತಿ ಘೋಷಣೆ! ಯಾರ್ಯಾರು ಗೊತ್ತೇ?

Tue, 20 Feb 2024-1:44 pm,

ಬಂಗಾಳದ ದಿಗ್ಗಜ ಮನೋಜ್ ತಿವಾರಿ, ಜಾರ್ಖಂಡ್ ಬ್ಯಾಟ್ಸ್‌’ಮನ್ ಸೌರಭ್ ತಿವಾರಿ ಮತ್ತು ವೇಗದ ಬೌಲರ್ ವರುಣ್ ಆರೋನ್, ಮುಂಬೈನ ಧವಲ್ ಕುಲಕರ್ಣಿ ಮತ್ತು ವಿದರ್ಭದ ಫೈಜ್ ಫಜಲ್ ತಮ್ಮ ನಿವೃತ್ತಿಗೆ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಒಪ್ಪಂದ ಮಾಡಿಕೊಳ್ಳದಿರುವುದು ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಕಳೆದುಕೊಂಡಿರುವುದು ಈ ಕಾರಣಗಳಲ್ಲಿ ಸೇರಿವೆ.

ವರುಣ್ ಆರೋನ್, ಮನೋಜ್ ತಿವಾರಿ ಮತ್ತು ಫೈಜ್ ಫಜಲ್ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಅದೇ ಮೈದಾನದಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ  

ಬಂಗಾಳದ 38 ವರ್ಷದ ಮನೋಜ್ ತಿವಾರಿ ಸೋಮವಾರ ಬಿಹಾರ ವಿರುದ್ಧ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಬಳಿಕ ತಂಡಕ್ಕೆ ವಿದಾಯ ಹೇಳಿದರು. ಈ ಆಕ್ರಮಣಕಾರಿ ಬ್ಯಾಟ್ಸ್‌’ಮನ್ ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ 10,000ಕ್ಕೂ ಹೆಚ್ಚು ರನ್‌’ಗಳನ್ನು ಗಳಿಸಿದ್ದು, ಭಾರತ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಸೌರಭ್ 17 ವರ್ಷಗಳ ಕಾಲ ಜಾರ್ಖಂಡ್ ತಂಡದಲ್ಲಿ ಆಡಿದ್ದಲ್ಲದೆ, ಭಾರತ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 115 ಪ್ರಥಮ ದರ್ಜೆ ಪಂದ್ಯಗಳಲ್ಲಿ 8030 ರನ್ ಗಳಿಸಿದ್ದು, ಇದರಲ್ಲಿ 22 ಶತಕಗಳು ಮತ್ತು 34 ಅರ್ಧ ಶತಕಗಳು ಸೇರಿವೆ.

ಭಾರತದ ವೇಗದ ಬೌಲರ್‌’ಗಳಲ್ಲಿ ಒಬ್ಬರಾದ ವರುಣ್ ಆರೋನ್ ಗಾಯಗಳಿಂದಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇವರು ಭಾರತದ 9 ಟೆಸ್ಟ್ ಮತ್ತು ಅನೇಕ ODI ಪಂದ್ಯಗಳನ್ನು ಆಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 66 ಪಂದ್ಯಗಳಲ್ಲಿ 173 ವಿಕೆಟ್‌’ಗಳನ್ನು ಪಡೆದಿದ್ದಾರೆ.

ಫೈಜ್ ಫಜಲ್ 21 ವರ್ಷಗಳ ಕಾಲ ವಿದರ್ಭ ಪರ ಆಡಿದ್ದರು. ಈ ಆರಂಭಿಕ ಬ್ಯಾಟ್ಸ್‌ಮನ್ ನಾಯಕತ್ವದಲ್ಲಿ, ವಿದರ್ಭ 2018 ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ ಅವರ ಹೆಸರಿನಲ್ಲಿ 9183 ರನ್‌’ಗಳು ದಾಖಲಾಗಿವೆ.2016 ರಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಪರ ODI ಪಂದ್ಯವನ್ನು ಆಡಿದ್ದು, ಇದರಲ್ಲಿ ಅಜೇಯ 55 ರನ್ ಗಳಿಸಿದ್ದಾರೆ.

ಭಾರತ ಪರ 12 ODI ಮತ್ತು 2 T20 ಪಂದ್ಯಗಳನ್ನು ಆಡಿರುವ ಧವಳ್ ಕುಲಕರ್ಣಿ, 17 ವರ್ಷಗಳ ಕಾಲ ದೇಶೀಯ ವೃತ್ತಿಜೀವನದಲ್ಲಿ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ. 35 ವರ್ಷ ವಯಸ್ಸಿನ ವೇಗದ ಬೌಲರ್ 95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.31 ಸರಾಸರಿಯಲ್ಲಿ 281 ವಿಕೆಟ್ಗಳನ್ನು ಪಡೆದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link