Sovereign Gold Bondನಲ್ಲಿ ಹೂಡಿಕೆ ಮಾಡಿದರೆ ಸಿಗುವ ಐದು ಅದ್ಬುತ ಪ್ರಯೋಜನಗಳಿವು .!

Tue, 21 Jun 2022-4:07 pm,

SGB ​​ಯ ಮುಕ್ತಾಯ ಅವಧಿ ಎಂಟು ವರ್ಷಗಳು. ಆದರೆ, ಲಾಕ್-ಇನ್ ಅವಧಿಯು ಐದು ವರ್ಷಗಳು. SGB ಅನ್ನು ಮುಕ್ತಾಯದವರೆಗೆ ಉಳಿಸಿಕೊಂಡರೆ, ಹೂಡಿಕೆಯ ಮೇಲೆ ಯಾವುದೇ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

SGBsಯಲ್ಲಿ  ಗ್ಯಾರಂಟೀಡ್ ರಿಟರ್ನ್ ಸಿಗುತ್ತದೆ.  ಹೂಡಿಕೆದಾರರು 2.5 ಪ್ರತಿಶತ ವಾರ್ಷಿಕ ಬಡ್ಡಿಯನ್ನು ಇದರಲ್ಲಿ ಪಡೆಯುತ್ತಾರೆ. ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಭೌತಿಕ ಚಿನ್ನದಂತೆ, ಅದರ ಸುರಕ್ಷಿತ ಸಂಗ್ರಹಣೆಯಾ ಬಗ್ಗೆ ಚಿಂತೆ ಪಡಬೇಕಾಗಿಲ್ಲ. SGB ​​ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ. 

ಸಾಲದ ಮೇಲಾಧಾರಕ್ಕಾಗಿ SGB ಅನ್ನು ಬಳಸಬಹುದು. ಲೋನ್ ಟು ವ್ಯಾಲ್ಯೂ ಅನುಪಾತವು ಸಾಮಾನ್ಯ ಚಿನ್ನದ ಸಾಲದಂತೆಯೇ ಇರುತ್ತದೆ. ಇದಕ್ಕಾಗಿ ಆರ್‌ಬಿಐ ಕಾಲಕಾಲಕ್ಕೆ ನಿಯಮಗಳನ್ನು ನಿಗದಿಪಡಿಸುತ್ತದೆ. 

ಗೋಲ್ಡ್ ಕಾಯಿನ್ ಮತ್ತು ಬಾರ್‌ನಂತಹ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಜಿಎಸ್‌ಟಿ ಪಾವತಿಸಬೇಕಿಲ್ಲ. ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಭೌತಿಕ ಚಿನ್ನದಂತೆ 3% GST ಪಾವತಿಸಬೇಕಾಗಿಲ್ಲ. ಬಾಂಡ್‌ಗಳ ಮೇಲೆ ಯಾವುದೇ ಮೇಕಿಂಗ್ ಚಾರ್ಜ್‌ಗಳನ್ನು ಕೂಡಾ ಪಾವತಿಸಬೇಕಾಗಿಲ್ಲ. 

ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ದಿನಾಂಕದಿಂದ 15 ದಿನಗಳಲ್ಲಿ ಬಾಂಡ್ ಅನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ಮಾಡಲಾಗುತ್ತದೆ. ಈ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ರಿಸರ್ವ್ ಬ್ಯಾಂಕ್ ಚಂದಾದಾರಿಕೆಗಾಗಿ ಕಂತುಗಳಲ್ಲಿ ನೀಡಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link