November Grah Gochar: ನವೆಂಬರ್‌ನಲ್ಲಿ 5 ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ, ಈ ರಾಶಿಯವರಿಗೆ ವಿಶೇಷ ಲಾಭ
ಪ್ರತಿ ತಿಂಗಳಿನಂತೆ ನವೆಂಬರ್ ತಿಂಗಳಿನಲ್ಲಿಯೂ ಕೂಡ ಕೆಲವು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ನವೆಂಬರ್‌ನಲ್ಲಿ ನ್ಯಾಯದ ದೇವರು ಶನಿ ಸೇರಿದಂತೆ ಐದು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ನವೆಂಬರ್ ತಿಂಗಳಿನಲ್ಲಿ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಐದು ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರಲಿವೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ನವೆಂಬರ್‌ನಲ್ಲಿ ಯಾವ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿಯೋಣ...
ನವೆಂಬರ್‌ನಲ್ಲಿ ಮೊದಲಿಗೆ ಸುಖ-ಸಂಪತ್ತು, ಐಷಾರಾಮಿ ಜೀವನದ ಅಂಶವಾದ ಶುಕ್ರ ಗ್ರಹವು ರಾಶಿ ಪರಿವರ್ತನೆ ಹೊಂದಲಿದೆ. ಶುಕ್ರನು ನವೆಂಬರ್ 3, 2023 ರಂದು, ಬೆಳಿಗ್ಗೆ 05:24ರ ಸುಮಾರಿಗೆ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.
ದೀರ್ಘ ಸಮಯದಿಂದ ಹಿಮ್ಮುಖವಾಗಿ ಚಲಿಸುತ್ತಿದ್ದ ನ್ಯಾಯದ ದೇವರು ಶನಿ ದೇವ ನವೆಂಬರ್‌ನಲ್ಲಿ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ನವೆಂಬರ್ 4, 2023 ರಂದು ಮಧ್ಯಾಹ್ನ 12:31 ಕ್ಕೆ ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ಮಾರ್ಗಿ ಆಗಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ನವೆಂಬರ್ 6, 2023ರಂದು ಸಂಜೆ 04:32ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಕಮಾಂಡರ್ ಗ್ರಹ ಎಂತಲೇ ಕರೆಯಲ್ಪಡುವ ಮಂಗಳನು 16 ನವೆಂಬರ್ 2023 ರಂದು ಬೆಳಿಗ್ಗೆ 11:04ರ ಸುಮಾರಿಗೆ ತನ್ನದೇ ಆದ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
ನವೆಂಬರ್ ಮಧ್ಯದಲ್ಲಿ ಎಂದರೆ ನವೆಂಬರ್ 17, 2023ರಂದು ಮಧ್ಯಾಹ್ನ 01:30ಕ್ಕೆ ಗ್ರಹಗಳ ರಾಜ ಸೂರ್ಯ ದೇವನು ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
17 ನವೆಂಬರ್ 2023 ರಂದು ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ಮಂಗಳ, ಬುಧ, ಸೂರ್ಯ ಸಂಯೋಗದಿಂದ ಶುಭಕರ ತ್ರಿಗ್ರಾಹಿ ಯೋಗ ನೀರ್ಮಾನವಾಗಲಿದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳಿನಲ್ಲಿ ಶುಕ್ರ, ಶನಿ, ಬುಧ, ಮಂಗಳ, ಸೂರ್ಯ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಐದು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ತರಲಿದೆ. ಈ ಸಮಯದ್ಲಲಿ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಕುಂಭ ರಾಶಿಯ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.