Akshaya Tritiya 2023: ಮಂಗಳನ ರಾಶಿಯಲ್ಲಿ `ಪಂಚಗ್ರಹಿ ಯೋಗ`, 4 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತಿನ ಜೊತೆಗೆ ಉನ್ನತಿಯ ಯೋಗ!

Fri, 14 Apr 2023-2:23 pm,

ವೃಷಭ ರಾಶಿ: ನಿಮ್ಮ ರಾಶಿಯ ವಿಶೇಷತೆ ಎಂದರೆ ನಿಮ್ಮ ರಾಶಿಯಲ್ಲಿಯೇ ಚಂದ್ರ ಹಾಗೂ ಶುಕ್ರರ ಮೈತ್ರಿ ನೆರವೇರುತ್ತಿದೆ. ಇದಲ್ಲದೆ ಪಂಚಗ್ರಹಿ ಯೋಗದ ಕಾರಣ ನಿಮ್ಮ ಗೋಚರ ಜಾತಕದಲ್ಲಿ ರಾಜಯೋಗ ಕೂಡ ರೂಪುಗೊಳ್ಳುತ್ತಲಿದೆ. ಇದರಿಂದ ಕಾರ್ಯಸ್ಥಳದಲ್ಲಿ ನೀವು ಮಾಡುವ ಕೆಲಸ ಕಾರ್ಯಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಲಿದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನ-ಸಂಪತ್ತಿನ ಜೊತೆಗೆ ಸುಖ-ಸಮೃದ್ಧಿ ಪ್ರಾಪ್ತಿಯಾಗಲಿದೆ. ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.   

ಕರ್ಕ ರಾಶಿ: ಕರ್ಕ ರಾಶಿಯ ಜನರ ಪಾಲಿಗೆ ಈ ಬಾರಿಯ ಅಕ್ಷಯ ತೃತೀಯ ತಿಥಿ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ರಾಶಿಗಳ ಜನರ ಜಾತಕದ ದಶಮೇಶ ಭಾವದಲ್ಲಿ ಈ ಮಹಾಮೈತ್ರಿ ಯೋಗ ನಿರ್ಮಾಣಗೊಳ್ಳುತ್ತಲಿದೆ. ಇನ್ನೊಂದೆಡೆ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಈಗಾಗಲೇ ಶುಕ್ರ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ದಿನ ಚಿನ್ನ ಬೆಳ್ಳಿ ಖರೀದಿಸುವುದರಿಂದ ಭವಿಷ್ಯದಲ್ಲಿ ನಿಮಗೆ ಅಪಾರ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಧಿಕ ಲಾಭದ ಲಕ್ಷಣಗಳು ಗೋಚರಿಸುತ್ತಿವೆ.   

ಮೇಷ ರಾಶಿ: ಈ ರಾಶಿಗೆ ಮಂಗಳ ಅಧಿಪತಿ ಹೀಗಾಗಿ ಈ ರಾಶಿಯ ಜನರ ಪಾಲಿಗೆ ಅಕ್ಷಯ ತೃತೀಯಾ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಲ್ಲೇ ಈ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಇದರ ಜೊತೆಗೆ ನೌಕರಿಯಲ್ಲಿ ಹಾಗೂ ವ್ಯಾಪಾರದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ. ಈ ದಿನ ದಾನ ಮಾಡುವುದರಿಂದ ಹಲವು ಪಟ್ಟು ಹೆಚ್ಚು ಶುಭ ಫಲಗಳನ್ನು ಪಡೆದುಕೊಳ್ಳಬಹುದು.   

ಸಿಂಹ ರಾಶಿ: ಸಿಂಹ ರಾಶಿಯ ಜನರ ಪಾಲಿಗೂ ಕೂಡ ಈ ಬಾರಿಯ ಅಕ್ಷಯ ತೃತಿಯ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗ್ರಹಗಳ ರಾಜ ಸೂರ್ಯನ ಸಂಚಾರ ನಡೆಯುತ್ತಿದೆ. ಹೀಗಾಗಿ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ದೇವ ದೇವತೆಗಳ ಕೃಪಾವೃಷ್ಟಿಯ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಅಪಾರ ಧನಲಾಭವಾಗುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಲ್ಲಿ ನೀವು ಯಶಸ್ಸನ್ನು ಕಾಣಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link