ಕೇಂದ್ರ ಸರ್ಕಾರದ ಬೆನ್ನಲೇ ಸರ್ಕಾರಿ ನೌಕರರ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರ !ದೀಪಾವಳಿ ಹೊತ್ತಲ್ಲಿ ಸಿಕ್ಕಿತು ಭರ್ಜರಿ ಗಿಫ್ಟ್
ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಕೂಡಾ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿವೆ. ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಉದ್ಯೋಗಿಗಳಿಗೆ ಡಿಎ ಹೆಚ್ಚಳವು ಆರ್ಥಿಕ ಪರಿಹಾರವನ್ನು ನೀಡುತ್ತದೆ.
ದೀಪಾವಳಿಗೂ ಮುನ್ನವೇ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಅನ್ನು ಜುಲೈ 1ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ. ಇದರಿಂದ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಳವಾದ ವೇತನದ ಜೊತೆಗೆ ಮೂರು ತಿಂಗಳ ಬಾಕಿ ಡಿಎ ಕೂಡಾ ನೀಡಲಾಗುವುದು.
ಒಡಿಶಾ ಸರ್ಕಾರವು ರಾಜ್ಯದ ಸಾರ್ವಜನಿಕ ವಲಯದಲ್ಲಿ (ಪಿಎಸ್‌ಯು) ಕೆಲಸ ಮಾಡುವ ಉದ್ಯೋಗಿಗಳಿಗೆ ತುಟ್ಟಿಭತ್ಯೆಯಲ್ಲಿ 4% ಹೆಚ್ಚಳವನ್ನು ಅನುಮೋದಿಸಿದೆ. ಈ ಹೆಚ್ಚಳದ ನಂತರ ನೌಕರರ ಡಿಎ 46% ರಿಂದ 50% ಕ್ಕೆ ಏರಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಅನ್ನು 4% ದಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹೆಚ್ಚಳ ಜನವರಿ 1,ರಿಂದ ಜಾರಿಗೆ ಬರಲಿದೆ.
ಜಾರ್ಖಂಡ್ ಸರ್ಕಾರವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು 9% ಹೆಚ್ಚಿಸಿದೆ. ಈ ಹಿಂದೆ ನೌಕರರು ಆರನೇ ಕೇಂದ್ರ ವೇತನ ಆಯೋಗದಡಿಯಲ್ಲಿ 230% ಡಿಎ ಪಡೆಯುತ್ತಿದ್ದರು.ಇದೀಗ ಇದನ್ನು ಶೇ.239ಕ್ಕೆ ಹೆಚ್ಚಿಸಲಾಗಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 4% ದಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.ಈ ಮೂಲಕ ಅವರ ಒಟ್ಟು ತುಟ್ಟಿ ಭತ್ಯೆ ಶೇ.50ಕ್ಕೆ ಏರಿಕೆಯಾಗಿದೆ.
ಸಿಕ್ಕಿಂ ಸರ್ಕಾರವು ದುರ್ಗಾ ಪೂಜೆ ಹಬ್ಬಕ್ಕೂ ಮೊದಲು ತನ್ನ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯಲ್ಲಿ 4% ಹೆಚ್ಚಳವನ್ನು ಘೋಷಿಸಿದೆ.ರಾಜ್ಯ ಸರ್ಕಾರಿ ನೌಕರರು ಜನವರಿ 1, 2024ರಿಂದ 46% ಬದಲಿಗೆ 50% ಡಿಎ ಪಡೆಯುತ್ತಾರೆ.