Hair Loss Problem: ಕಡುಕಪ್ಪಾದ, ಉದ್ದವಾದ ಕೂದಲಿಗಾಗಿ ಆಹಾರದಲ್ಲಿ ಇರಲೇಬೇಕು ಈ 5 ಸೂಪರ್‌ಫುಡ್‌ಗಳು
ಕೂದಲು ಉದುರುವಿಕೆ, ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ನಿಮ್ಮ ದೈನಂದಿನ ಆಹಾರದಲ್ಲಿ ಇರಲೇಬೇಕು ಈ 5 ಸೂಪರ್‌ಫುಡ್‌ಗಳು. ಈ ಆಹಾರಗಳ ಬಳಕೆಯಿಂದ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಕಡು ಕಪ್ಪಾದ ಕೂದಲನ್ನು ನಿಮ್ಮದಾಗಿಸಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ನಮ್ಮಲ್ಲಿ ಕೆಲವರು ಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಆದರೆ, ತಾಜಾ ಹಾರಿಸು ಸೊಪ್ಪುಗಳಲ್ಲಿ ವಿಟಮಿನ್ ಬಿ, ಫೋಲೇಟ್ ಮತ್ತು ಕಬ್ಬಿಣಾಂಶ ಹೇರಳವಾಗಿ ಕಂಡು ಬರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಬಳಸುವುದರಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯಲು ಕೂಡ ಅನುಕೂಲವಾಗಲಿದೆ.
ಕಣ್ಣಿನ ಆರೋಗ್ಯಕ್ಕೆ ಮೀನು ತುಂಬಾ ಪ್ರಯೋಜನಕಾರಿ ಎಂದು ನೀವು ಕೇಳಿರಬಹುದು. ಆದರೆ, ವಿಟಮಿನ್ ಎ ಮತ್ತು ಒಮೆಗಾ -2 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೀನಿನ ಸೇವನೆಯಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಸುಲಭ ಪರಿಹಾರದ ಜೊತೆಗೆ ಇದು ಕೂದಲಿನ ಬೆಳವಣಿಗೆಗೆ, ಕೂದಲಿನ ಸಾಂದ್ರತೆಯನ್ನು ಹೆಚ್ಚಿಸಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ತಿನ್ನಲು ರುಚಿಕರವಾದ ಜಾಮೂನ್/ನೇರಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಹೇರಳವಾಗಿದೆ. ಈಹಣ್ಣಿನ ಸೇವನೆಯಿಂದ ಕಾಲಜನ್ ಉತ್ಪಾದನೆಗೆ ಸಹಕಾರಿ ಆಗಿದ್ದು, ಇದು ಕೂದಲನ್ನು ಬುಡದಿಂದಲೂ ಬಲವಾಗಿಸಿ ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಮೆಂತ್ಯ ಬೀಜಗಳಲ್ಲಿ ವಿಟಮಿನ್ ಇ ಹೇರಳವಾಗಿದ್ದು ಇದನ್ನು ಕೂದಲು ಉದುರುವಿಕೆ ಸಮಸ್ಯೆಗೆ ರಾಮಬಾಣ ಎಂದು ಪರಿಗಣಿಸಲಾಗಿದೆ. ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯ ಬೀಜಗಳನ್ನು ನೆನೆಸಿಟ್ಟು ಬೆಳಿಗ್ಗೆ ಶೋಧಿಸಿ ಈ ನೀರನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ.
ಮೊಟ್ಟೆಗಳಲ್ಲಿ ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ಬಯೋಟಿನ್ ಹೇರಳವಾಗಿದೆ. ಇದರ ಬಳಕೆಯಿಂದ ಕೂದಲುದುರುವಿಕೆಯಷ್ಟೇ ಅಲ್ಲ, ಕೂದಲಿನ ಇನ್ನೂ ಕೆಲವು ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.