ಟೀಂ ಇಂಡಿಯಾದ ಬ್ಯಾಟ್ಸ್ ಮ್ಯಾನ್ ಮಾಡಿದ ಈ ದಾಖಲೆಯನ್ನು ಮುರಿಯುವುದಿರಲಿ, ಅದರ ಹತ್ತಿರ ಸುಳಿಯುವುದು ಕೂಡಾ ಅಸಾಧ್ಯ !
2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಿರುವ ಇನ್ನಿಂಗ್ಸ್ ಯಾರೂ ಊಹಿಸುವುದಕ್ಕೂ ಸಾಧ್ಯವಾಗದೆ ಇರುವಂಥದ್ದು. ಈ ಪಂದ್ಯದಲ್ಲಿ 264 ರನ್ ಗಳಿಸುವ ಮೂಲಕ ಏಕದಿನ ಮಾದರಿಯಲ್ಲಿ ಗರಿಷ್ಠ ಸ್ಕೋರ್ ಮಾಡಿದ ವಿಶ್ವದಾಖಲೆ ರೋಹಿತ್ ಶರ್ಮಾ ಮುಡಿಯಲ್ಲಿದೆ.
ಅನೇಕ ಬ್ಯಾಟ್ಸ್‌ಮನ್‌ಗಳು ತಮ್ಮ ಸಂಪೂರ್ಣ ODI ವೃತ್ತಿಜೀವನದಲ್ಲಿ ಒಂದು ದ್ವಿಶತಕವನ್ನು ಗಳಿಸುವಲ್ಲಿ ಯಶಸ್ವಿಯಾಗುವುದಿಲ್ಲ.ಆದರೆ ರೋಹಿತ್ ಮೂರು ದ್ವಿಶತಕಗಳನ್ನು ಗಳಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ.ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಇದುವರೆಗೆ 620 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.ಇಲ್ಲಿಯವರೆಗೆ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡಾ 600ರ ಗಡಿ ದಾಟಿಲ್ಲ.
ರೋಹಿತ್ ಶರ್ಮಾ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2019ರಲ್ಲಿ,ಅವರು 5 ಶತಕಗಳನ್ನು ಗಳಿಸಿದರು.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್.2024ರ ಟಿ 20 ವಿಶ್ವಕಪ್ ಗೆದ್ದ ನಂತರ ಈ ಸ್ವರೂಪದಿಂದ ನಿವೃತ್ತರಾದ ಈ ಅನುಭವಿ ಬ್ಯಾಟ್ಸ್‌ಮನ್ 205 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.