ಅಗಸೆ ಬೀಜ ಮಧುಮೇಹಿಗಳಿಗೆ ದಿವೌಷಧಿ.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ !
![ಮಧುಮೇಹ Flax Seeds Benefits](https://kannada.cdn.zeenews.com/kannada/sites/default/files/2024/04/25/401094-falx-seeds-6.jpg?im=FitAndFill=(500,286))
ಮಧುಮೇಹವನ್ನು ಕೆಲವು ಮನೆ ಮದ್ದುಗಳ ಮೂಲಕವೂ ಕಂಟ್ರೋಲ್ ಮಾಡಬಹುದು. ಮನೆಮದ್ದುಗಳಲ್ಲಿ ಒಂದು ಅಗಸೆ ಬೀಜ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.
![ಮಧುಮೇಹ Flax Seeds Benefits](https://kannada.cdn.zeenews.com/kannada/sites/default/files/2024/04/25/401092-falx-seeds-5.jpg?im=FitAndFill=(500,286))
ಅಗಸೆ ಬೀಜ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಫೈಬರ್ ಅನ್ನು ಹೊಂದಿರುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಅಗಸೆ ಬೀಜಗಳನ್ನು ಕಡಿಮೆ ಗ್ಲೈಸೆಮಿಕ್ ಆಹಾರವೆಂದು ಪರಿಗಣಿಸಲಾಗುತ್ತದೆ.
![ಮಧುಮೇಹ Flax Seeds Benefits](https://kannada.cdn.zeenews.com/kannada/sites/default/files/2024/04/25/401091-falx-seeds-4.jpg?im=FitAndFill=(500,286))
ಅಗಸೆ ಬೀಜ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ. ಬ್ಲಡ್ ಶುಗರ್ ನಿಯಂತ್ರಣದಲ್ಲಿರಲು ಅಗಸೆ ಬೀಜ ಸಹಾಯ ಮಾಡುತ್ತದೆ.
ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಅಗಸೆಬೀಜವನ್ನು ಕಷಾಯದ ರೂಪದಲ್ಲಿ ಸೇರಿಸಿಕೊಳ್ಳಬಹುದು. ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ.
ಅಗಸೆಬೀಜದ ಕಷಾಯವನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ. ಅದಕ್ಕೆ ಅರ್ಧ ಚಮಚ ಅಗಸೆಬೀಜ ಸೇರಿಸಿ. ನೀರು ಅರ್ಧಕ್ಕೆ ಬರುವವರೆಗೂ ಕುದಿಸಿ ಗ್ಯಾಸ್ ಆಫ್ ಮಾಡಿ. ಈ ನೀರು ಕೊಂಚ ಗಟ್ಟಿಯಾಗಿರುತ್ತದೆ. ಇದನ್ನು ಸೇವಿಸಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.