ಬಿಳಿ ಕೂದಲು ಕಪ್ಪಾಗಿ ಕಾಂತಿಯುವವಾಗುವಂತೆ ಮಾಡಲು ಅಗಸೆ ಬೀಜ, ತೆಂಗಿನೆಣ್ಣೆಯಷ್ಟೇ ಸಾಕು!

Tue, 24 Sep 2024-1:44 pm,

ಬಿಳಿ ಕೂದಲನ್ನು ಕಪ್ಪಾಗಿಸಿ ಕೂದಲಿನ ಸರ್ವ ಸಮಸ್ಯೆಗಳಿಂದಲೂ ಪರಿಹಾರ ನೀಡಲು ತೆಂಗಿನೆಣ್ಣೆಯೊಂದಿಗೆ ಅಗಸೆ ಬೀಜ ಬಹಳ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

ಪುರಾತನ ಕಾಲದಿಂದಲೂ ಆಹಾರದಲ್ಲಿ ಹಲವು ವಿಧದಲ್ಲಿ ಬಳಸಲ್ಪಡುವ ಅಗಸೆ ಬೀಜವು ಬಿಳಿ ಕೂದಲನ್ನು ಕಪ್ಪಾಗಿಸಿ, ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲೂ ಪರಿಣಾಮಕಾರಿ. 

ಒಂದು ಪಾತ್ರೆಯಲ್ಲಿ ಸ್ವಲ್ಪ ಅಗಸೆ ಬೀಜ, ನೀರು ಹಾಕಿ ಹೆಚ್ಚಾಗಿ ಕುದಿಸಿ. ಅದು ನೊರೆ ಬಂದು ಲೋಳೆಯಂತೆ ಆಗುವವರೆಗೂ ಸಣ್ಣ ಉರಿಯಲ್ಲಿ ಕುದಿಸಿ. ಬಳಿಕ ಅದನ್ನು ಬಟ್ಟೆ ಸಹಾಯದಿಂದ ಶೋಧಿಸಿಕೊಳ್ಳಿ. 

ಶೋಧಿಸಿಟ್ಟ ಅಗಸೆಜೀಜದ ಜೆಲ್  2 ಸ್ಪೂನ್ ಹಾಗೂ ತೆಂಗಿನೆಣ್ಣೆಯನ್ನು ಸಮ ಪ್ರಮಾನ್ದಲ್ಲಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ನಾನ ಮಾಡುವ ಅರ್ಧಗಂಟೆ ಮೊದಲು ಕೂದಲಿಗೆ ಅನ್ವಯಿಸಿ. 

ನೀವು ತಲೆಗೆ ಸ್ನಾನ ಮಾಡುವಾಗಲೆಲ್ಲಾ ಈ ಅಗಸೆಬೀಜ, ತೆಂಗಿನೆಣ್ಣೆ ಮಿಶ್ರಣವನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಬಳಿಕ ಹೇರ್ ವಾಶ್ ಮಾಡಿ. ಇದರಿಂದ ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ಪಡೆಯಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link