Flipkart Big Saving Days: ಕೇವಲ 1,990 ರೂ.ಗೆ ಖರೀದಿಸಿ ವಿವೋ 5G ಸ್ಮಾರ್ಟ್‌ಫೋನ್
ಇತ್ತೀಚೆಗೆ ಬಿಡುಗಡೆಯಾದ Vivoನ 5G ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ನಲ್ಲಿ ಶೇ.20ರಷ್ಟು ರಿಯಾಯಿತಿ ಸಿಗುತ್ತಿದೆ. 19,990 ರೂ. ಮೂಲಬೆಲೆಯ ಈ ಫೋನ್ ಅನ್ನು ನೀವು 15,990 ರೂ.ಗೆ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ 13 ಸಾವಿರ ರೂ. ವರೆಗೆ ಉಳಿಸಬಹುದು. SBI ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು 1,000 ರೂ. ಉಳಿಸಲು ಸಾಧ್ಯವಾಗುತ್ತದೆ. ಈ ರೀತಿ ನೀವು Vivo T1 5G ಫೋನ್ ಅನ್ನು ಕೇವಲ 1,990 ರೂ.ಗೆ ಖರೀದಿಸಬಹುದು.
ರಿಯಲ್ ಮಿಯ 128GB ಸ್ಟೋರೇಜ್ ಹೊಂದಿರುವ ಈ 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 20,999 ರೂ. ಬದಲಿಗೆ 17,499 ರೂ.ಗೆ ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು 1,500 ರೂ. ಉಳಿಸಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ 13 ಸಾವಿರ ರೂ.ವರೆಗೆ ಉಳಿಸಬಹುದು. ಇವೆಲ್ಲಾ ಪ್ರಯೋಜನಗಳನ್ನು ಪಡೆದುಕೊಂಡರೆ ನೀವು 2,999 ರೂ.ಗಳಿಗೆ Realme 9 5G ಫೋನ್ ಖರೀದಿಸಬಹುದು.
16,999 ರೂ. ಬೆಲೆಯ Pocoನ 5G ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 14,999 ರೂ.ಗೆ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು 13 ಸಾವಿರ ರೂ. ರಿಯಾಯಿತಿ ಪಡೆಯಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಮತ್ತೆ 1 ಸಾವಿರ ರೂ. ಉಳಿಸಬಹುದು. ಆಗ ಈ 5G ಫೋನ್‌ನ ಬೆಲೆ 999 ರೂ. ಆಗಲಿದೆ.
Redmiಯ ಈ 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 15,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಇದರ ಮೂಲ ಬೆಲೆ 18,999 ರೂ. ಆಗಿದೆ. ನೀವು ಯಾವುದೇ ಬ್ಯಾಂಕಿನ ಕಾರ್ಡ್‌ಗಳಿಂದ ಪಾವತಿಸಿದರೆ 500 ರೂ.ಗಳ ರಿಯಾಯಿತಿ ಪಡೆಯುತ್ತೀರಿ. SBI ಕಾರ್ಡ್ ಬಳಸಿದರೆ ನಿಮಗೆ 1 ಸಾವಿರ ರೂ.ಗಳ ರಿಯಾಯಿತಿ ಸಿಗುತ್ತದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದ ಮೇಲೆ 13 ಸಾವಿರ ರೂ.ವರೆಗೆ ಉಳಿಸಬಹುದು. ಈ ಎಲ್ಲಾ ಪ್ರಯೋಜನ ಪಡೆದುಕೊಂಡರೆ ಕೇವಲ 1,499 ರೂ.ಗೆ ಈ ಫೋನ್ ಖರೀದಿಸಬಹುದು.
Motorolaದ ಈ 5G ಸ್ಮಾರ್ಟ್‌ಫೋನ್ ಅನ್ನು 17,999 ರೂ.ಗಳ ಬದಲಿಗೆ 14,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಮೂಲಕ ಪಾವತಿಸಿದರೆ ನೀವು 750 ರೂ. ಉಳಿಸಲು ಸಾಧ್ಯವಾಗುತ್ತದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು 13 ಸಾವಿರ ರೂ. ರಿಯಾಯಿತಿ ಪಡೆಯಬಹುದು. ಆಗ ನಿಮಗೆ ಈ ಫೋನ್ ಕೇವಲ 1,249 ರೂ.ಗೆ ಸಿಗುತ್ತದೆ.