ಮನೆಯಂಗಳದಲ್ಲಿ ಈ ಹೂವಿನ ಗಿಡ ಅಪ್ಪಿತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!
ಹಾವುಗಳನ್ನು ಕಂಡರೆ ಸಾಮಾನ್ಯವಾಗಿ ಭಯವಾಗುತ್ತದೆ. ವಿಷಕಾರಿ ಹಾವುಗಳಾಲಿ, ವಿಷರಹಿತ ಹಾವುಗಳಾಗಲಿ, ನೋಡಿದರೆ ಅನೇಕರು ಅಲ್ಲಿಂದ ಹೇಳದೆ ಕೇಳದೆ ಓಡಿ ಹೋಗೋದು ಗ್ಯಾರಂಟಿ. ಇನ್ನು ಕೆಲವೊಂದು ಬಾರಿ ಮನೆಗಳಿಗೂ ಹಾವುಗಳು ಪ್ರವೇಶಿಸುತ್ತವೆ. ಇದಕ್ಕೆ ಕಾರಣ ಅನೇಕ ಇರಬಹುದು.
ಅಂದಹಾಗೆ ಕೆಲವೊಂದು ಗಿಡಗಳು ಹಾವುಗಳಿಗೆ ಆಹ್ವಾನವಿದ್ದಂತೆ. ಆ ಗಿಡಗಳಿಂದ ಬರುವ ಪರಿಮಳ ಹಾವುಗಳನ್ನು ಅಯಸ್ಕಾಂತದಂತೆ ಆಕರ್ಷಣೆ ಮಾಡುತ್ತವೆ. ನಾವಿಂದು ಅಂತಹ ಗಿಡಗಳು ಯಾವುವು ಎಂಬುದನ್ನು ತಿಳಿಯೋಣ.
ಮಲ್ಲಿಗೆ ಗಿಡಗಳು: ಬೇಸಿಗೆ ಬಂತೆಂದರೆ ಸುವಾಸನೆ ಬೀರುವ ಮಲ್ಲಿಗೆ ಗಿಡಗಳು ಹಾವುಗಳನ್ನು ಆಕರ್ಷಿಸುತ್ತದೆ. ದೂರದವರೆಗೆ ಪರಿಮಳ ಬೀರುವ ಮಲ್ಲಿಗೆ ಹೂವುಗಳ ವಾಸನೆಯು ಹಾವುಗಳನ್ನು ಆಕರ್ಷಿಸುತ್ತದೆ,
ಕಾಕಡ ಮಲ್ಲಿಗೆ: ಪರಿಮಳ ಕೊಂಚ ಕಡಿಮೆಯಾದರೂ ಸಹ ಕಾಕಡ ಮಲ್ಲಿಗೆ ಗಿಡಗಳು ಹಾವುಗಳನ್ನೂ ಆಕರ್ಷಿಸುತ್ತವೆ. ಇದಕ್ಕೆ ಕಾರಣ ಅದರ ಎಲೆಗಳು, ಪೊದೆಯಂತೆ ಈ ಗಿಡ ಆವರಿಸಿಕೊಳ್ಳುವ ಕಾರಣ ಹಾವುಗಳು ಅದರೆಡೆಗಳಲ್ಲಿ ಅಡಗಿ ಕುಳಿತುಕೊಳ್ಳುತ್ತವೆ.
ಕೇದಗೆ: ಕೇದಗೆಯನ್ನು ಸಾಮಾನ್ಯವಾಗಿ ನಾಗರ ಹಾವಿನ ವಾಸಸ್ಥಾನ ಎಂದೇ ಹೇಳಲಾಗುತ್ತದೆ. ಕರಾವಳಿ ಭಾಗದಲ್ಲಿ ಈ ಹೂವಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ಇದರ ಗಾಢ ಪರಿಮಳವೇ ಹಾವುಗಳು ಇದರಲ್ಲಿ ಬಂದು ನೆಲೆಸಲು ಕಾರಣ.
ಪಾರಿಜಾತ ಮರಗಳು: ಪಾರಿಜಾತವು ಕೆಲವೇ ಪ್ರದೇಶಗಳಲ್ಲಿ ಕಂಡುಬರುವ ದೇವತಾ ವೃಕ್ಷವಾಗಿದೆ. ಈ ಹೂವು ಉತ್ತಮ ಸುಗಂಧ ಬೀರುವ ಕಾರಣ, ಹಾವುಗಳನ್ನೂ ಆಕರ್ಷಿಸುತ್ತದೆ.
(ಸೂಚನೆ: ಈ ಲೇಖನವು ಸಾರ್ವಜನಿಕ ನಂಬಿಕೆಗಳನ್ನು ಆಧರಿಸಿದೆ. ಜೊತೆಗೆ ಅಂತರ್ಜಾಲದಲ್ಲಿ ಮಾತ್ರ ಲಭ್ಯವಿರುವ ಮಾಹಿತಿಯಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಪರಿಶೀಲಿಸಿಲ್ಲ. ಇದು ಸಂಪೂರ್ಣವಾಗಿ ನಿಜವೆಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)