ಮನೆಯಂಗಳದಲ್ಲಿ ಅರಳಿ ನಿಂತಿರುವ ಈ ಹೂವನ್ನು ಬಾಯಿಗೆ ಹಾಕಿಕೊಂಡರೆ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !ಒಮ್ಮೆ ಟ್ರೈ ಮಾಡಿ ನೋಡಿ ಸಾಕು !
ಕೆಲವು ನೈಸರ್ಗಿಕ ಪರಿಹಾರಗಳ ಸಹಾಯದಿಂದ, ಪ್ರಿಡಿಯಾಬಿಟಿಸ್ ಮತ್ತು ಮಧುಮೇಹದ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ವಿಶೇಷವಾಗಿ ಕೆಲವು ವಿಶೇಷ ಸಸ್ಯಗಳ ಹೂವುಗಳಿಂದ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಇರುತ್ತದೆ.
ಡೇಲಿಯಾ ಹೂವಿನ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಬ್ಯುಟೇನ್ ಎಂಬ ಆಹಾರದ ಫ್ಲೇವನಾಯ್ಡ್ ಅನ್ನು ಹೊಂದಿದ್ದು, ಪ್ರಿಡಿಯಾಬಿಟಿಸ್ ಮತ್ತು ಟೈಪ್ 2 ಮಧುಮೇಹಕ್ಕೆ ಪರಿಹಾರವಾಗಿದೆ
ಸದಾ ಪುಷ್ಟ ದೇಹದಲ್ಲಿ ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ಬಹಳ ಬೇಗನೆ ನಿಯಂತ್ರಿಸುತ್ತದೆ. ಮಧುಮೇಹದ ಹೊರತಾಗಿ ಈ ಹೂವು ಕ್ಯಾನ್ಸರ್ ತಡೆಗಟ್ಟಲು, ಗಂಟಲು ನೋವು, ಕೆಮ್ಮಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಬಳಸಬಹುದು.
ಬಾಳೆ ಹೂವು ಮಧುಮೇಹ ರೋಗಿಗಳಿಗೆ ತುಂಬಾ ಆರೋಗ್ಯಕರ ಆಹಾರ.ಇದು ಮಧುಮೇಹದ ಸಮಸ್ಯೆಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಎನ್ನುವುದು ಸಂಶೋಧನೆಯಿಂದಲೇ ಸಾಬೀತಾಗಿದೆ.
ದಾಸವಾಳದ ಹೂವುಗಳಿಂದ ತಯಾರಿಸಿದ ಚಹಾವನ್ನು ಸೇವಿಸುವ ಮೂಲಕ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ತಯಾರಿಸಿದ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಫಾಸ್ಟಿಂಗ್ ಶುಗರ್ ಕಡಿಮೆಯಾಗುತ್ತದೆ
ಶಂಖ ಪುಷ್ಪ ಹೂವುಗಳನ್ನು ಕುದಿಸಿದ ನೀರನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡಬಹುದು.ಇದರ ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.