Flower in Dream: ಅದೃಷ್ಟಕ್ಕೆ ಸಂಬಂಧಿಸಿದಂತೆ ಹೂವುಗಳಿಂದಲೂ ಸಿಗುತ್ತೆ ಸಂಕೇತ

Thu, 17 Feb 2022-11:42 am,

ನಿಮ್ಮ ಕನಸಿನಲ್ಲಿ ಹೂವಿನ ಹಾರವನ್ನು ನೀವು ನೋಡಿದರೆ, ಮನೆಯಲ್ಲಿ ಕೆಲವು ಮಂಗಳಕರ ಅಥವಾ ಶುಭ ಕಾರ್ಯಗಳು ನಡೆಯಲಿವೆ ಎಂದರ್ಥ. ಉದಾಹರಣೆಗೆ ಮದುವೆ, ಗೃಹಪ್ರವೇಶ ಇತ್ಯಾದಿ. 

ನಿಮ್ಮ ಕನಸಿನಲ್ಲಿ ಗುಲಾಬಿಗಳನ್ನು ನೋಡುವುದು ಎಂದರೆ ಪ್ರೀತಿ ನಿಮ್ಮ ಜೀವನದಲ್ಲಿ ಪ್ರವೇಶಿಸಲಿದೆ ಎಂದರ್ಥ. ನೀವು ಈಗಾಗಲೇ ಪ್ರೀತಿಸುತ್ತಿದ್ದರೆ, ಅದು ಪ್ರೀತಿಯನ್ನು ಹೆಚ್ಚಿಸುವ ಮತ್ತು ಗೌರವವನ್ನು ಪಡೆಯುವ ಸಂಕೇತವಾಗಿದೆ.

ಕನಸಿನಲ್ಲಿ ಕಮಲದ ಹೂವನ್ನು ನೋಡುವುದು ತುಂಬಾ ಮಂಗಳಕರ. ಇದು ನಿಮ್ಮ ಮೇಲೆ ಲಕ್ಷ್ಮಿಯ ಕೃಪೆಯ ಸ್ಪಷ್ಟ ಸೂಚನೆಯಾಗಿದೆ. ಅಂತಹ ಕನಸನ್ನು ಹೊಂದುವುದು ಬಹಳಷ್ಟು ಹಣವನ್ನು ಪಡೆಯುವ ಸಂಕೇತವನ್ನು ನೀಡುತ್ತದೆ.

ನಿಮ್ಮ ಕನಸಿನಲ್ಲಿ ಮಲ್ಲಿಗೆ ಹೂವನ್ನು ನೋಡುವುದು ಎಂದರೆ ನಿಮ್ಮ ಅದೃಷ್ಟವು ಬೆಳಗಲಿದೆ ಎಂದರ್ಥ. ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷಗಳು ಬರಲಿವೆ. 

ನಿಮ್ಮ ಕನಸಿನಲ್ಲಿ ಮಾರಿಗೋಲ್ಡ್ ಹೂವನ್ನು ಅಂದರೆ ಚೆಂಡು ಹೂವನ್ನು ನೋಡುವುದು ಎಂದರೆ ನಿಮ್ಮ ಕೈಯಲ್ಲಿ ಕೆಲವು ದೊಡ್ಡ ದಾನ ಕಾರ್ಯಗಳು ನಡೆಯಲಿವೆ ಎಂದರ್ಥ.

ನಿಮ್ಮ ಕನಸಿನಲ್ಲಿ ಬಣ್ಣಬಣ್ಣದ ಹೂವುಗಳಿಂದ ತುಂಬಿದ ಉದ್ಯಾನವನ್ನು ನೀವು ನೋಡಿದರೆ, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದರ್ಥ. 

ಕನಸಿನಲ್ಲಿ ಹಳೆಯ ಅಥವಾ ಒಣಗಿದ ಹೂವುಗಳನ್ನು ನೋಡುವುದು ಒಳ್ಳೆಯದಲ್ಲ. ಅಂತಹ ಕನಸು ಬಂದರೆ, ನಿಮ್ಮ ಆಪ್ತರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ, ಇಲ್ಲದಿದ್ದರೆ ಜಗಳವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link