ಆಯುರ್ವೇದದ ಈ ಸಂಗತಿಗಳಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ, ಹೃದ್ರೋಗಿಗಳ ಪ್ರಾಣ ಉಳಿಯುತ್ತೆ
1. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ವಿಪರೀತವಾಗಿ ಹೆಚ್ಚಾದರೆ, ನೀವು ನೆಲ್ಲಿಕಾಯಿಯನ್ನು ಸೇವಿಸಬಹುದು. ಇದಕ್ಕಾಗಿ ನೀವು ಬೆಟ್ಟದ ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಬಹುದು, ಅಥವಾ ಜ್ಯೂಸ್, ಪುಡಿ ಮತ್ತು ಟ್ಯಾಬ್ಲೆಟ್ ರೂಪದಲ್ಲಿ ಬಳಸಬಹುದು.
2. ಅರ್ಜುನ ಹಣ್ಣನ್ನು ನೀವು ಹಲವು ಬಾರಿ ತಿಂದಿರಬೇಕು, ಆದರೆ ಒಮ್ಮೆ ಅರ್ಜುನ್ ಗಿಡದ ತೊಗಟೆಯನ್ನು ಪ್ರಯತ್ನಿಸಿ ನೋಡಿ. ಇದನ್ನು ಹಾಲಿನಲ್ಲಿ ಬೆರೆಸಿ ಪ್ರತಿದಿನ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹೃದ್ರೋಗಿಗಳಿಗೆ ಇದನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ.
3. ಬೆಳ್ಳುಳ್ಳಿ ಒಂದು ವಿಧದ ಸಾಂಬಾರ ಪದಾರ್ಥವಾಗಿದ್ದು, ನಾವು ಹಲವಾರು ರೆಸಿಪಿಗಳ ರುಚಿಯನ್ನು ಹೆಚ್ಚಿಸಲು ಬಳಸುತ್ತೇವೆ, ಪ್ರತಿದಿನ ಇದರ 2 ರಿಂದ 3 ಕುಡಿಗಳನ್ನು ತಿಂದರೆ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ದೂರಾಗುತ್ತದೆ.
4. ಶುಂಠಿಯ ರುಚಿ ಕಹಿಯಾಗಿದ್ದರೂ, ದಿನನಿತ್ಯ ಹಸಿಯಾಗಿ ಜಗಿಯುತ್ತಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೇ ಶುಂಠಿಯಿಂದ ತಯಾರಿಸಿದ ಹರ್ಬಲ್ ಟೀ ಕುಡಿದರೆ ಅದರಿಂದಲೂ ಕೂಡ ಪ್ರಯೋಜನವಾಗುತ್ತದೆ.
5. ನಿಂಬೆಯಲ್ಲಿ ವಿಟಮಿನ್ ಸಿ ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ತನ್ಮೂಲಕ ನೀವು ಕೊಬ್ಬನ್ನು ಸುಡಬಹುದು, ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)