ಆನ್‌ಲೈನ್ ವಂಚನೆಯಿಂದ ಬಚಾವಾಗಲು ಈ ಕ್ರಮಗಳನ್ನು ಅನುಸರಿಸಿ
ಭಾರತ ಸರ್ಕಾರದ ಹೆಸರಿನಲ್ಲಿ ಅನೇಕ ನಕಲಿ ಲಾಟರಿ ಯೋಜನೆಗಳನ್ನು ನಡೆಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಲಭ್ಯವಿರುವ ಈ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ.
ಲಾಟರಿ ಗೆದ್ದಿರುವ ಬಗ್ಗೆ ವಂಚಕರಿಂದ ಫೋನ್ ಕರೆ/ಇ-ಮೇಲ್/ಸಂದೇಶ ಬಂದರೆ ತಕ್ಷಣ ಎಚ್ಚರ ವಹಿಸಿ. ಇಲ್ಲವಾದರೆ ಭಾರೀ ನಷ್ಟಕ್ಕೆ ಗುರಿಯಾಗಬೇಕಾಗಬಹುದು.
ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಲಾಭದಾಯಕ ಲಾಟರಿ ಯೋಜನೆಯ ನೆಪದಲ್ಲಿ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಫೋನ್‌ನಲ್ಲಿ ಹಂಚಿಕೊಳ್ಳಬೇಡಿ ಎಂದು PIB ಫ್ಯಾಕ್ಟ್ ಚೆಕ್ ಹೇಳಿದೆ.
ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಹಲವು ಬಾರಿ ನಕಲಿ ಸಂದೇಶಗಳು ಅಥವಾ ಇ-ಮೇಲ್‌ಗಳು ಬರುತ್ತವೆ. ಈ ಸಂದೇಶಗಳನ್ನು ತಕ್ಷಣವೇ ಡಿಲೀಟ್ ಮಾಡಿ.