ಡಯಾಬಿಟೀಸ್ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆಯೇ ಈ ವಿಚಾರಗಳ ಬಗ್ಗೆ ಗಮನ ಹರಿಸಿದರೆ ಸಿಗಲಿದೆ ಶಾಶ್ವತ ಪರಿಹಾರ
ಸಾಮಾನ್ಯವಾಗಿ ಸೇವಿಸುವ ಬಿಳಿ ಸಕ್ಕರೆಯು ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಈ ಕಾರಣದಿಂದಾಗಿ ನಿಮ್ಮ ದೇಹವು ಯಾವುದೇ ಅಗತ್ಯ ಪೋಷಣೆಯನ್ನು ಪಡೆಯುವುದಿಲ್ಲ. ಬಿಳಿ ಸಕ್ಕರೆಯ ಸೇವನೆಯು ಟೈಪ್-2 ಮಧುಮೇಹ ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಅದನ್ನು ನಿಮ್ಮ ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕಬಹುದು.
ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ದೇಹವನ್ನು ಸಕ್ರಿಯವಾಗಿರಿಸುವುದು. ಆಹಾರ ಸೇವಿಸಿದ ನಂತರ ವಾಕ್ ಮಾಡಿ. ಯೋಗ ಮತ್ತು ವ್ಯಾಯಾಮ ಕೂಡಾ ಒಳ್ಳೆಯದು. ಕನಿಷ್ಠ 30 ನಿಮಿಷಗಳ ವ್ಯಾಯಾಮವು ಪ್ರಿಡಿಯಾಬಿಟಿಸ್ ಸ್ಥಿತಿಯನ್ನು ಗುಣಪಡಿಸಳು ಸಹಾಯ ಮಾಡುತ್ತದೆ. ದೇಹವು ಸಕ್ರಿಯವಾಗಿದ್ದಾಗ, ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವು ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲ ರೋಗಗಳಿಂದಲೂ ದೂರ ಉಳಿಯುತ್ತೀರಿ.
ಹಾಗಲಕಾಯಿ, ಹಲಸಿನ ಬೀಜಗಳು, ಪುದೀನ, ಮೂಲಂಗಿ, ಬದನೆ ಮುಂತಾದ ಕೆಲವು ತರಕಾರಿಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ತರಕಾರಿಗಳ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಆಲ್ಕೋಹಾಲ್ ಮತ್ತು ಧೂಮಪಾನವು ಇನ್ಸುಲಿನ್ ಕೆಲಸವನ್ನು ನಿಲ್ಲಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುವುದರಿಂದ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ, ಇನ್ಸುಲಿನ್ ಪ್ರತಿರೋಧದಂತಹ ಸ್ಥಿತಿಗೆ ಬಲಿಯಾಗಬಹುದು. ರಾತ್ರಿಯಲ್ಲಿ ಆಗಾಗ್ಗೆ ಕಣ್ಣುಗಳು ತೆರೆದುಕೊಳ್ಳುವುದರಿಂದ ಅಥವಾ ಸಾಕಷ್ಟು ನಿದ್ರೆ ಮಾಡದ ಕಾರಣ ದಣಿವಾಗುತ್ತದೆ. ಇದು ಹಾರ್ಮೋನುಗಳ ಅಸಮತೋಲನದಂತಹ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ನಿದ್ದೆ ಮಾಡಲೇ ಬೇಕು. .