ಈ ಮಾರ್ಗಗಳನ್ನು ಅನುಸರಿಸುವ ಮೂಲಕ ಆರ್ಥಿಕ ಸಂಕಷ್ಟಗಳನ್ನು ಹೊಡೆದೋಡಿಸಬಹುದು ..!

Thu, 05 Aug 2021-4:29 pm,

ಗುರುವಾರ ಭಗವಾನ್ ವಿಷ್ಣುವಿನ ದಿನ. ವಿಷ್ಣುವನ್ನು ಯಾವಾಗಲೂ ಲಕ್ಷ್ಮಿಯೊಂದಿಗೆ ಪೂಜಿಸಲಾಗುತ್ತದೆ. ಗುರುವಾರ ಸ್ನಾನ ಮಾಡಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ,  ವಿಷ್ಣು ಮತ್ತು ಲಕ್ಷ್ಮಿ ದೇವಿಯ ಮುಂದೆ ದೀಪವನ್ನು ಹಚ್ಚಬೇಕು. ಇದರ ನಂತರ ಬೃಹಸ್ತಪತಿಯ ಕಥೆಯನ್ನು ಕೇಳಬೇಕು. ಹೀಗೆ ಮಾಡುವುದರಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಸುಧಾರಿಸುತ್ತದೆ. ಅಲ್ಲದೆ, ಮನೆಯಲ್ಲಿ ಎಂದಿಗೂ ಹಣದ ಕೊರತೆ ಕಂಡು ಬರುವುದಿಲ್ಲ. 

ವಿಷ್ಣುವಿಗೆ ತುಳಸಿ ಎಂದರೆ ಬಹಳ ಪ್ರಿಯ. ಬಾಳೆಹಣ್ಣಿನಲ್ಲಿಯೂ ವಿಷ್ಣುವಿನ ವಾಸವಿದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ  ಗುರುವಾರ ತುಳಸಿ ಮತ್ತು ಬಾಳೆ ಗಿಡವನ್ನು ಪೂಜಿಸಿದರೆ, ನಿಮ್ಮ ಎಲ್ಲಾ ತೊಂದರೆಗಳು ದೂರವಾಗಬಹುದು. ಇದಕ್ಕಾಗಿ, ಗುರುವಾರ ಸ್ನಾನ ಮಾಡಿದ ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಸ್ವಲ್ಪ ಅರಿಶಿನ, ಕಡಲೆ ಬೇಳೆ ಮತ್ತು ಬೆಲ್ಲವನ್ನು ಬೆರೆಸಿ ಮಿಶ್ರಣ ಮಾಡಿ. ನಂತರ ಅದನ್ನು ಬಾಳೆಗಿಡದ ಬೇರಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ  ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಸಂಜೆ ತುಳಸಿ ಗಿಡದ ಕೆಳಗೆ ತುಪ್ಪದ ದೀಪ ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆಯಂತೆ.

ಗುರುವಾರ, ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಕುಂಕುಮ ಮತ್ತು ಒಂದೂವರೆ ಕಿಲೋಗ್ರಾಂಗಳಷ್ಟು ಕಡಲೆ ಬೇಳೆಯನ್ನು ಅರ್ಪಿಸಬೇಕು. ಅಲ್ಲದೆ, ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಅದರ ನಂತರ ಆ ಕಡಲೆ ಬೇಳೆಯನ್ನು ಬಡವರಿಗೆ ದಾನ ಮಾಡಬೇಕು. ಇದರೊಂದಿಗೆ ಗುರುವಾರ ಕಡಲೆ ಬೇಳೆ, ಬೆಲ್ಲಕ್ಕೆ ಅರಶಿನವನ್ನು ಸೇರಿಸಿ,ಅದನ್ನು ಹಸುವಿಗೆ ನೀಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. 

ದಕ್ಷಿಣ ಮತ್ತು ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಮನೆಯ ಯಾವುದೇ ಮೂಲೆಯನ್ನು ಗಂಗಾಜಲದಿಂದ ತೊಳೆಯಿರಿ. ಇದರ ನಂತರ, ಕುಂಕುಮದಿಂದ  ಸ್ವಸ್ತಿಕವನ್ನು ಬರೆಯಿರಿ. ಆ ಸ್ವಸ್ತಿಕಕ್ಕೆ ಕಡಲೆ ಬೇಳೆ ಮತ್ತು ಬೆಲ್ಲವನ್ನು ಅರ್ಪಿಸಿ. ಈ ಬೇಳೆ ಮತ್ತು ಬೆಲ್ಲವು ಹಾಳಾಗಲು ಪ್ರಾರಂಭಿಸಿದಾಗ, ಅದನ್ನು ಶುದ್ಧ ನೀರಿನಲ್ಲಿ ಹರಿಯಲು ಬಿಡಿ. 5 ಗುರುವಾರದವರೆಗೆ ಹೀಗೆ ಮಾಡುವುದರಿಂದ, ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link