Tips to sleep better: ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಟಿಪ್ಸ್ ಬಳಸಿ

Mon, 13 Jun 2022-3:47 pm,

ಕೆಲವರು ಮಲಗಲು ಹೋಗುವುದೇ ತಡ ತಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಯೋಚಿಸಲು ಆರಂಭಿಸುತ್ತಾರೆ. ಹೀಗಾದಾಗ ಸರಿಯಾಗಿ ನಿದ್ದೆ ಮಾಡುವುದು ಕಷ್ಟ. ಮಲಗುವ ಮುನ್ನ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಕೋಣೆಯಲ್ಲಿನ  ದೀಪಗಳನ್ನು ಮಂದಗೊಳಿಸಿ.   ಹೀಗೆ ಮಾಡುವುದರಿಂದ ಇದು ನಿದ್ದೆಯ ಸಮಯ ಎಂಬ ಸಂಕೇತಗಳನ್ನು ಮೆದುಳು ಕೂಡಾ ಪಡೆದುಕೊಳ್ಳುತ್ತದೆ. 

ಮಲಗುವ ಮುನ್ನ ದೇಹದ ಉಷ್ಣತೆಯನ್ನು ನಿಯಂತ್ರಿಸಿ. ಇದರೊಂದಿಗೆ ಮಲಗುವ ಮುನ್ನ ನಿಮ್ಮ ಕೋಣೆಯ ಉಷ್ಣಾಂಶವನ್ನು ಕೂಡಾ ಹೊಂದಿಸಿಕೊಳ್ಳಿ. ಮಲಗುವ ಕೋಣೆಯಲ್ಲಿ ತಾಪಮಾನವು ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚಿರುವುದರಿಂದ ಜನರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಮಲಗುವ ಮುನ್ನ ಬಿಸಿ ನೀರಿನಿಂದ ಸ್ನಾನವನ್ನು ಮಾಡುವುದರಿಂದ ವಿಶ್ರಾಂತಿ ಪಡೆಯಬಹುದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿನದ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.   

ಸೆಲ್ ಫೋನ್‌ಗಳು, ಟಿವಿ, ಲ್ಯಾಪ್‌ಟಾಪ್‌ಗಳ ಬೆಳಕು ನಿದ್ದೆಗೆ ತೊಂದರೆ ನೀಡಬಹುದು. ಆದ್ದರಿಂದ ಮಲಗುವ ಸಮಯಕ್ಕೆ ಕನಿಷ್ಠ ಅರ್ಧ ಘಂಟೆಯ ಮೊದಲು ಅವುಗಳನ್ನು ಆಫ್ ಮಾಡಿಕೊಳ್ಳಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link