ಮೆಹಂದಿ ರಂಗು ಬರ್ತಾ ಇಲ್ವಾ ಹಾಗಾದರೆ, ಈ ಟಿಪ್ಸ್ ಫಾಲೋ ಮಾಡಿ...
ಮೆಹಂದಿ ಹಚ್ಚುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೈಯಲ್ಲಿರುವ ಕೊಳಕೆಲ್ಲ ಹೋಗಿ ಕೈ ಚೆನ್ನಾಗಿ ಒಣಗಬೇಕು. ನಂತರ ಮೆಹಂದಿ ಹಚ್ಚಿದರೆ ಅದು ಚೆನ್ನಾಗಿ ಕಾಣುತ್ತದೆ.
ಕೈ ತೊಳೆದ ನಂತರ ಮಾಯಿಶ್ಚರೈಸರ್ ಬಳಸಬೇಡಿ. ನೇರವಾಗಿ ಕಾಲಿ ಕೈಗಳ ಮೇಲೆ ಮೆಹಂದಿ ಹಚ್ಚಿ. ಮಾಯಿಶ್ಚರೈಸರ್‌ಗಳಲ್ಲಿ ಇರುವ ರಾಸಾಯನಿಕಗಳು ಮೆಹಂದಿ ಕೆಂಪಾಗುವುದರಿಂದ ತಡೆಗಟ್ಟುತ್ತದೆ.
ಮೆಹಂದಿ ಹಚ್ಚಿದ ನಂತರ ಅದು ಒಣಗುವುದು ತುಂಬಾ ಮುಖ್ಯ. ಸಕ್ಕರೆ ನೀರು, ಕೊಬ್ಬರಿ ಎಣ್ಣೆ ಏನನ್ನೇ ಬಳಸಿದರೂ ಕೂಡಾ ಅದನ್ನು ಒಣಗಿಸುವುದು ತುಂಬಾ ಮುಖ್ಯ.
ಸಕ್ಕರೆ ಮತ್ತು ನಿಂಬೆರಸ ಮಿಶ್ರಣ ಮಾಡಿ ಒಣಗಿದ ಮೆಹಂದಿಯ ಮೇಲೆ ಲೇಪಿಸಿ. ಇದು ಮೆಹಂದಿಗೆ ಬಣ್ಣ ನೀಡುವುದರಲ್ಲಿ ಸಹಾಯ ಮಾಡುತ್ತದೆ.
ಲವಂಗವನ್ನು ತವಾದ ಮೇಲೆ ಹಾಕಿ ಹೊಗೆ ಆಡಲು ಬಿಡಿ ನಂತರ ಆ ಹೊಗೆಯ ಶಾಕದಲ್ಲಿ ನಿಮ್ಮ ಕೈ ಅನ್ನು ತೋರಿಸಿ. ನಿಮ್ಮ ಮೆಹಂದಿ ಹಚ್ಚಿದ ಕೈಗಳನ್ನ ಲವಂಗದ ಶಾಕಕ್ಕೆ ಒಡ್ಡುವುದರಿಂದ ನಿಮ್ಮ ಕೈಗಳಿಗೆ ಇದು ಗಾಡ ಬಣ್ಣವನ್ನು ನೀಡುತ್ತದೆ.