ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಈ ವಸ್ತುಗಳನ್ನಿಟ್ಟರೆ ಪ್ರಾಪ್ತಿಯಾಗುತ್ತದೆ ಯಶಸ್ಸು..!
ಹತ್ತಿ : ನೀವು ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಬೇಕಾದರ ದೇವರ ಕೋಣೆಯಲ್ಲಿ ಅಕ್ಕಿಯೊಂದಿಗೆ ಹತ್ತಿಯನ್ನು ಇರಿಸಿ. ಇದರೊಂದಿಗೆ, ಕೆಲವು ಸಕ್ಕರೆ ಮತ್ತು ಧಾನ್ಯಗಳನ್ನು ದೇವರ ಮನೆಯಲ್ಲಿ ಇರಿಸಿ. ಹೀಗೆ ಮಾಡಿದರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎನ್ನಲಾಗುತ್ತದೆ.
ಅಕ್ಕಿ ತುಂಬಿದ ಕಲಶ : ಕಲಶದ ನೀರಿ ಬಹಳ ಚಮತ್ಕಾರಗಳನ್ನು ಮಾಡುತ್ತದೆ ಎನ್ನಲಾಗುತ್ತದೆ. ಚಿಕ್ಕದಾದ ತಾಮ್ರದ ಕಲಶವನ್ನು ತೆಗೆದುಕೊಂಡು ಅದನ್ನು ಅಕ್ಕಿಯಿಂದ ತುಂಬಿಸಿ. ಈ ಕಲಶವನ್ನು ಯಾರಿಗೂ ತತಿಳಿಯದಂತೆ ದೇವಸ್ಥಾನದಲ್ಲಿ ಇಟ್ಟು ಬನ್ನಿ,.
ಬೆಳ್ಳಿಯ ತುಂಡು- ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು, ಕೈಯಲ್ಲಿ ಬೆಳ್ಳಿಯ ತುಂಡನ್ನು ತೆಗೆದುಕೊಂಡು ಅದನ್ನು ಹೂವುಗಳು ಮತ್ತು ಅಕ್ಕಿಯ ನಡುವೆ ಮರೆಮಾಡಿ ದೇವಸ್ಥಾನದಲ್ಲಿ ಇರಿಸಿ. ದೇವಸ್ಥಾನದಲ್ಲಿ ಇಡಲು ಸಾಧ್ಯವಾಗದಿದ್ದರೆ ಮನೆಯ ದೇವರ ಮನೆಯಲ್ಲಾದರೂ ಇಡಬಹುದು.
ಅಡಿಕೆ -ಮಲಗಿರುವ ಅದೃಷ್ಟವನ್ನು ಅಡಿಕೆ ಬಡಿದೆಬ್ಬಿಸುತ್ತದೆ. ಅಡಿಕೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅಡಿಕೆಯನ್ನು ಪೂಜೆ ಮತ್ತು ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಅಕ್ಕಿಯನ್ನು ಕರವಸ್ತ್ರದಲ್ಲಿ ಸುತ್ತಿ ಅದರಲ್ಲಿ ಅಡಿಕೆ ಇಟ್ಟು ಯಾರಿಗೂ ತಿಳಿಸದೆ ದೇವಸ್ಥಾನದಲ್ಲಿ ಇಟ್ಟರೆ ಯಶಸ್ಸು ಸಿಗುತ್ತದೆ.
ಒಂದು ರೂಪಾಯಿ ನಾಣ್ಯ- ಒಂದು ರೂಪಾಯಿ ನಾಣ್ಯವನ್ನು ದೇವಸ್ಥಾನದಲ್ಲಿ ಅರ್ಪಿಸಿದರೆ ಯಾವುದೇ ತೊಂದರೆಯಿಂದ ಮುಕ್ತಿ ಪಡೆಯಬಹುದು. ಇದಕ್ಕಾಗಿ 1 ರೂಪಾಯಿ ನಾಣ್ಯವನ್ನು 1 ಹಿಡಿ ಅಕ್ಕಿಯೊಂದಿಗೆ ತೆಗೆದುಕೊಳ್ಳಿ. ಈಗ ನಿಮ್ಮ ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಂಡು ನಾಣ್ಯವನ್ನು ದೇವಾಲಯದಲ್ಲಿ ಇಡಿ.