ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಲು ಈ ರೀತಿ ಮಾಡಿ! ಖಂಡಿತ ಆರ್ಥಿಕ ಸಂಕಷ್ಟದಿಂದ ಪರಿಹಾರ ಸಿಗುತ್ತದೆ
ನಾವು ಎಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು, ಸಹ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಬಡತನವಂತೂ ಬೆಂಬಿಡದೆ ಕಾಡುತ್ತದೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ದರಿದ್ರ ದೇವತೆ ನೆಲಸಿದ್ದಾಳೆ ಎಂದು ಅರ್ಥ.
ಮನೆಯಲ್ಲಿ ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಆಸ್ತಿಪಾಸ್ತಿ ನಷ್ಟ, ಪತಿ-ಪತ್ನಿಯರ ಜಗಳದಂತಹ ಹಲವಾರು ತೊಂದರೆಗಳು ಎದುರಾಗುತ್ತಿರುತ್ತದೆ. ಅದಕ್ಕೆ ಕಾರನ ನಿಮ್ಮನ್ನು ದರಿದ್ರ ದೇವತೆ ಸುತ್ತು ವರೆದಿದ್ದಾಳೆ ಎಂದು.
ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಲು ಏನು ಮಾಡಬೇಕು? ಯಾವ ರೀತಿಯ ಪೂಜೆ ಮಾಡುವುದರಿಂದ ನಾವು ದರಿದ್ರ ದೇವತೆಯಿಂದ ಮುಕ್ತಿ ಪಡೆಯ ಬಹುದು? ಮುಂದೆ ಓದಿ....
ದೇವರು ಮತ್ತು ದೇವತೆಗಳನ್ನು ಮನೆಗೆ ಆಹ್ವಾನಿಸಬಹುದು, ಆದರೆ ದರಿದ್ರ ದೇವತೆಯನ್ನು ಮನೆಗೆ ಆಹ್ವಾನಿಸುವದರಿಂದ ಮನೆಯಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತದೆ.
ದರಿದ್ರ ದೇವತೆಯನ್ನು ನಿಮ್ಮ ಮನೆಗೆ ಆಹ್ವಾನಿಸುವುದರಿಂದ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅಡೆತಡೆಯಾಗುತ್ತದೆ. ಆರ್ಥಿಕ ಸಂಕ್ಷಟ, ಬಡತನ, ಬಿಕ್ಕಟ್ಟಿನಂತಹ ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯಲು ಆರಂಭಿಸುತ್ತದೆ.
ಮನೆಯಲ್ಲಿರುವ ದರಿದ್ರ ದೇವತೆಯನ್ನು ಹೊರಹಾಲು ತಿಂಗಳಲ್ಲಿ ಒಂದು ಭಾರಿ ಶುಕ್ರವಾರ ಅಥವಾ ಮಂಗಳವಾರ ಧೂಪವನ್ನು ಹಚ್ಚಿ.
ಸಾಂಬ್ರಾಣಿ, ಹಸುವಿನ ತುಪ್ಪ, ಒಣ ಕೊಬ್ಬರಿ ಪುಡಿ ಮತ್ತು ಸಕ್ಕರೆಯನ್ನು ಒಟ್ಟಿ ಒಂದು ಪಾತ್ರೆಯಲ್ಲಿ ಹಾಕಿ ಸುಟ್ಟು ಇಡೀ ಮನೆಗೆ ಹೊಗೆ ಹೋಗುವಂಎ ಇಡಿ.
ಈ ವಸ್ತುಗಳನ್ನು ಮಿಶ್ರಣ ಮಾಡಿ ಧೂಪ ಹಚ್ಚುವುದರಿಂದ ದರಿದ್ರ ದೇವತೆ ಮನೆ ಬಿಟ್ಟು ಓಡಿ ಹೋಗುತ್ತಾಳೆ.
ಈ ರೀತಿ ಮಾಡುವುದರಿಂದ ನಿಮಗೆ ದರಿದ್ರ ದೇವತೆಯಿಂದ ಮುಕ್ತಿ ಸಿಗುತ್ತದೆ ಮತ್ತು ಎಲ್ಲಾ ಹಣ ಕಾಸಿನ ಸಮಸ್ಯೆಗಲು ಪರಿಹಾರವಾಗುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)