Food History: ಹೈದರಾಬಾದ್ ಬಿರಿಯಾನಿ ಹುಟ್ಟಿದ್ದು ಹೇಗೆ ಗೊತ್ತಾ? ಈ ಸ್ವಾದಿಷ್ಟ ಆಹಾರದ ಹಿಂದಿದೆ ರೋಚಕ ಸ್ಟೋರಿ..!
ಹೈದರಾಬಾದ್ ನಗರವನ್ನು 1630 ರಲ್ಲಿ ಮೊಘಲರು ವಶಪಡಿಸಿಕೊಂಡರು.ಆಗ ಅವರ ಸಾಮಂತರಾಗಿ ಆಳ್ವಿಕೆ ನಡೆಸಿದ ನಿಜಾಮರು ಹೈದಾರಾಬಾದ್ ಪಾಕ್ ಪದ್ದತಿಯ ಜೊತೆಗೆ ಮುಘಲಾಯಿ ಪಾಕಶಾಲೆಯ ಸಂಪ್ರದಾಯಗಳನ್ನೂ ಅಳವಡಿಸಿಕೊಂಡರು.
ಹೈದರಾಬಾದಿನ ಬಿರಿಯಾನಿಯನ್ನು ಮೊದಲ ನಿಜಾಮ್, ನಿಜಾಮ್-ಉಲ್-ಮುಲ್ಕ್, ಅಸಫ್ ಜಾ I ರ ಬಾಣಸಿಗ 18 ನೇ ಶತಮಾನದ ಮಧ್ಯಭಾಗದಲ್ಲಿ ಬೇಟೆಯಾಡುವ ವೇಳೆ ಈ ಬಿರ್ಯಾನಿಯನ್ನು ಕಂಡು ಹಿಡಿದನು ಎನ್ನಲಾಗುತ್ತದೆ.
1857 ರಲ್ಲಿ, ಮೊಘಲ್ ಸಾಮ್ರಾಜ್ಯವು ದೆಹಲಿಯಲ್ಲಿ ಅವನತಿ ಹೊಂದಿದಾಗ, ಹೈದರಾಬಾದ್ ದಕ್ಷಿಣ ಏಷ್ಯಾದ ಸಂಸ್ಕೃತಿಯ ಕೇಂದ್ರವಾಗಿ ಹೊರಹೊಮ್ಮಿತು.ಅಂದಿನಿಂದ ಹೈದರಾಬಾದ್ ಬಿರ್ಯಾನಿ ಖಾದ್ಯವು ನಗರದೊಟ್ಟಿಗೆ ಸಮಾನಾರ್ಥಕವಾಗಿ ಕರೆಯಲಾಗುತ್ತಿದೆ.
ಬಿರ್ಯಾನಿಯನ್ನು ನಿಜಾಮರ ಬಾಣಸಿಗರು ತಯಾರಿಸಿದ್ದರು ಎಂದು ಹೇಳಲಾಗುತ್ತಿದ್ದರು ಸಹಿತ, ಮೂಲತಃ ಈ ಖಾದ್ಯ ದಕ್ಷಿಣ ಭಾರತದ್ದಾಗಿದೆ.
ಇದು ಫಲಾವ್ ನಂತೆ ಕಂಡು ಬಂದರೂ ಸಹಿತ ಇದನ್ನು ವಿಶೇಷವಾಗಿ ಡೆಕ್ಕಾನಿ ರೀತಿಯಲ್ಲಿ ಅಸಫ್ ಜಾ ಅವರ ಕಿಚನ್ ನಲ್ಲಿ ಇದನ್ನು ಸಿದ್ದಪಡಿಸಲಾಯಿತು.