Food History: ಭಾರತದಲ್ಲೆಲ್ಲಾ ಮನೆ ಮಾತಾದ ಸಮೋಸಾ ಹುಟ್ಟಿದ್ದು ಹೇಗೆ ಗೊತ್ತಾ? ಇಲ್ಲಿದೆ ಈ ಅದ್ಬುತ ಖಾದ್ಯದ ರೋಚಕ ಸ್ಟೋರಿ..!
ಇರಾನ್‌ನಲ್ಲಿ ಮೊದಲ ಬಾರಿಗೆ ಸಮೋಸವನ್ನು ಆಲೂಗಡ್ಡೆಗೆ ಬದಲಾಗಿ, ಕೊಚ್ಚಿದ ಮಾಂಸ ಅಥವಾ ಒಣ ಹಣ್ಣುಗಳಿಂದ ತುಂಬಿಸಲಾಗುತ್ತಿತ್ತು. ಆದರೆ ಸಮೋಸ ಭಾರತಕ್ಕೆ ಬಂದಾಗ ಅದರಲ್ಲಿ ಹಲವು ಬದಲಾವಣೆಗಳಾದವು.ಸಮೋಸಾ ಎಂಬ ಪದವು ಪರ್ಷಿಯನ್ ಭಾಷೆಯಾದ 'ಸಂಬೋಸಾಗ್' ನಿಂದ ಹುಟ್ಟಿಕೊಂಡಿದೆ.
ಕೆಲವು ಇತಿಹಾಸಕಾರರ ಪ್ರಕಾರ, ಮಹ್ಮದ್ ಘಜ್ನವಿಯ ಆಸ್ಥಾನದಲ್ಲಿ ಇದನ್ನು ಬಳಸಲಾಗುತ್ತಿ ಎಂದು ಹೇಳುತ್ತಾರೆ.ಆದರೆ ಪೋರ್ಚುಗೀಸರು ಭಾರತಕ್ಕೆ ಬಂದಾಗ ಸಮೋಸಾಗಳಲ್ಲಿ ಆಲೂಗಡ್ಡೆ ತುಂಬುವ ಪ್ರವೃತ್ತಿ ಪ್ರಾರಂಭವಾಯಿತು.ಇದು ಅಂದಿನಿಂದ ಇಂದಿನವರೆಗೂ ಹಾಗೆಯೇ ಮುಂದುವರೆದಿದೆ.
ಇರಾನ್‌ನಿಂದ ಸಮೋಸಾ ಭಾರತಕ್ಕೆ ಬಂದಾಗ, ಅದರಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಗಮನಾರ್ಹ. ಭಾರತದಲ್ಲಿ ಆಲೂಗಡ್ಡೆಯ ಹೊರತಾಗಿ ಈರುಳ್ಳಿ, ಬಟಾಣಿ, ಚೀಸ್, ನೂಡಲ್ಸ್ ಮತ್ತು ಪಾಲಕ್ ಸಮೋಸಾಗಳು ಸಹ ಲಭ್ಯವಿರುತ್ತವೆ.ಇಂದು ನಾವು ಸಮೋಸವನ್ನು ತಿಂಡಿಯಾಗಿ ತಿನ್ನುತ್ತಿದ್ದರೂ 10 ನೇ ಶತಮಾನದಲ್ಲಿ ಸಮೋಸವನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟವಾಗಿ ಬಳಸಲಾಗುತ್ತಿತ್ತು. ಆ ಸಮಯದಲ್ಲಿ ಸಮೋಸವನ್ನು ಎಣ್ಣೆಯಲ್ಲಿ ಹುರಿಯುತ್ತಿರಲಿಲ್ಲ, ಅವುಗಳನ್ನು ಬೆಂಕಿಯಲ್ಲಿ ಬೇಯಿಸಲಾಗುತ್ತಿತ್ತು. ದೆಹಲಿಯ ಸುಲ್ತಾನರು ಸಹ ಸಮೋಸವನ್ನು ಇಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತದೆ.
ಭಾರತದಲ್ಲಿ ತಯಾರಾಗುವ ಸಮೋಸಾಗಳ ಸ್ಟಫಿಂಗ್‌ನಲ್ಲಿಯೂ ಅನೇಕ ಮಸಾಲೆಗಳನ್ನು ಬಳಸಲಾಗುತ್ತದೆ. ಕೊತ್ತಂಬರಿ, ಜೀರಿಗೆ, ಕರಿಮೆಣಸು, ಶುಂಠಿ ಮತ್ತು ಇತರ ಮಸಾಲೆಗಳನ್ನು ಸೇರಿಸಲಾಗುತ್ತದೆ.
ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಸಮೋಸಾಗಳು ಲಭ್ಯ ಇದ್ದು, ಇವುಗಳ ಗಾತ್ರವು ಎಲ್ಲೆಡೆ ಸ್ವಲ್ಪ ಬದಲಾಗುತ್ತದೆ.