Food History: ವಡಾ ಪಾವ್ ಹುಟ್ಟಿದ್ದು ಎಲ್ಲಿ ಮತ್ತು ಹೇಗೆ ಗೊತ್ತೇ.? ಇಲ್ಲಿದೆ ನೀವೆಂದೂ ಕೇಳಿರದ ಕಥೆ...!
ಪಾವ್ ಎನ್ನುವ ಪದ ಮೂಲತ ಪೋರ್ಚುಗೀಸ್ ಭಾಷೆಯಿಂದ ಬಂದಿದೆ,ವಡಾ ಪಾವನ್ನು ಬಟಾಟಾ ವಡಾ ಎಂದು ಕರೆಯಲಾಗುತ್ತದೆ.
1966 ರಲ್ಲಿ ಅಶೋಕ್ ವೈದ್ಯ ಎನ್ನುವ ವ್ಯಕ್ತಿ ದಾದರ್ ರೈಲು ನಿಲ್ದಾಣದ ಹೊರಗೆ ಮೊದಲ ವಡಾ ಪಾವ್ ಸ್ಟಾಲ್ ಅನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಕೆಲವರು ಹೇಳುವ ಪ್ರಕಾರ ಸುಧಾಕರ್ ಮ್ಹಾತ್ರೆ ಎನ್ನುವ ಮೊದಲ ಬಾರಿಗೆ ವಡಾ ಪಾವ್ ಶಾಪ್ ಅನ್ನು ತೆರೆದರು ಎನ್ನುತ್ತಾರೆ.ಆದರೆ 1960 ರಲ್ಲಿ ವಝೆ ಕುಟುಂಬವು ರಸ್ತೆ ಬದಿಯ ಮನೆಯಲ್ಲಿನ ಕಿಟಕಿಯಲ್ಲಿ ಮಾರುವುದರ ಮೂಲಕ ಕಿಡಕಿ ವಡಾ ಪಾವ್ ಎಂದೇ ಅದು ಖ್ಯಾತವಾಗಿತ್ತು.
ಮಧ್ಯ ಮುಂಬೈನಲ್ಲಿ ಜವಳಿ ಗಿರಣಿಗಳ ಮುಚ್ಚುವಿಕೆಯು 1970 ರ ದಶಕದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಯಿತು.ಈ ಸಮಯದಲ್ಲಿ ರೂಪುಗೊಂಡ ಸ್ವದೇಶಿ ಪಕ್ಷವಾದ ಶಿವಸೇನೆ , ಗಿರಣಿ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವ ಪಕ್ಷ ಎನ್ನುವಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿತು.
ಇದೇ ವೇಳೆ ಪಕ್ಷದ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರು 1960 ರ ದಶಕದಲ್ಲಿ ಮರಾಠಿ ಜನರನ್ನು ಉದ್ಯಮಿಗಳಾಗಲು ಪ್ರೋತ್ಸಾಹಿಸಿದರು ,ಅಷ್ಟೇ ಅಲ್ಲದೆ ಉಡುಪಿ ರೆಸ್ಟೋರೆಂಟ್ ರೀತಿಯಲ್ಲಿ ಆಹಾರ ಮಳಿಗೆಗಳನ್ನು ಆರಂಭಿಸಲು ಕರೆ ನೀಡಿದರು.