Food History: ಕನ್ನಡಿಗರ ನೆಚ್ಚಿನ ತಿಂಡಿಯಾದ ಚಿತ್ರಾನ್ನ ಹುಟ್ಟಿಕೊಂಡಿರುವ ಕಥೆ ಕೇಳಿದ್ದಿರಾ? ಇಲ್ಲಿದೆ ಇದರ ರೋಚಕ ಇತಿಹಾಸ..!
ಮಧ್ಯಕಾಲೀನ ಭಾರತೀಯ ಅಡುಗೆಪುಸ್ತಕಗಳಾದ ಮಾನಸೋಲ್ಲಾಸ (ಕ್ರಿ.ಶ 1130 ) ಮತ್ತು ಪಾಕದರ್ಪಣ (ಕ್ರಿ.ಶ 1200) ದಲ್ಲಿ ಚಿತ್ರಾನ್ನವನ್ನು 'ಚಿತ್ರಪಾಕ' ಎಂದು ಉಲ್ಲೇಖಿಸಲಾಗಿದೆ.
ಬಳಸಲಾದ ಪದಾರ್ಥಗಳನ್ನು ಅವಲಂಬಿಸಿ, ನಿಂಬೆಹಣ್ಣು ಚಿತ್ರಾನ್ನ,ಈರುಳ್ಳಿ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ, ಕಾಯಿ ಸಾಸಿವೆ ಚಿತ್ರಾನ್ನ ಹೀಗೆ ವಿವಿಧ ಬಗೆಯ ಚಿತ್ರಾನ್ನಗಳನ್ನು ತಯಾರಿಸಬಹುದು.
ಈ ಖಾದ್ಯವು ಕರ್ನಾಟಕದಲ್ಲಿ ದೈನಂದಿನ ಆಹಾರದ ಭಾಗವಾಗಿ ಜನಪ್ರಿಯವಾಗಿದೆ.
ಅರಿಶಿನ ಪುಡಿಯನ್ನು ಸೇರಿಸಿದರೆ ಚಿತ್ರಾನ್ನ ಹಳದಿ ಬಣ್ಣವನ್ನು ನೀಡುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕೆಲವರು ಮಸಾಲೆಯಲ್ಲಿ ಬಳಸುತ್ತಾರೆ,
ಸಾಸಿವೆ ಕಾಳುಗಳು, ಹುರಿದ ಉದ್ದಿನಬೇಳೆ, ಕಡಲೆಕಾಳುಗಳು, ಕರಿಬೇವಿನ ಸೊಪ್ಪುಗಳು, ಮೆಣಸಿನಕಾಯಿಗಳು, ನಿಂಬೆ ರಸ ಮತ್ತು ಎಳೆಯ ಮಾವಿನ ತುರಿಗಳಂತಹ ಇತರ ವಸ್ತುಗಳನ್ನು ಒಗ್ಗರಣೆಗೆ ಬಳಸಲಾಗುತ್ತದೆ.