Weight Loss: ತೂಕ ನಷ್ಟವನ್ನು ಉತ್ತೇಜಿಸಲು ರಾತ್ರಿ ಊಟದಲ್ಲಿ ಇವುಗಳಿಂದ ದೂರ ಉಳಿಯಿರಿ

Mon, 01 Jul 2024-10:54 am,

ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ರಾತ್ರಿ ವೇಳೆ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರಿಂದ ತ್ವರಿತ ತೂಕ ಇಳಿಕೆಗೆ ಉತ್ತೇಜನ ದೊರೆಯುತ್ತದೆ.  ರಾತ್ರಿ ವೇಳೆ ಯಾವ ಆಹಾರಗಳನ್ನು ಸೇವಿಸಬಾರದು ಎಂದು ನೋಡುವುದಾದರೆ...   

ಅಕ್ಕಿಯಲ್ಲಿ  ಕ್ಯಾಲೋರಿಗಳು ಹೆಚ್ಚಾಗಿದ್ದು ಇದು ಪಿಷ್ಟ ಮತ್ತು ಕಾರ್ಬೋಹೈಡ್ರೆಟ್ ಗಳಲ್ಲಿ ಅಧಿಕವಾಗಿದೆ. ರಾತ್ರಿ ವೇಳೆ ಅಕ್ಕಿಯಿಂದ ತಯಾರಿಸಿದ ಆಹಾರಗಳ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ  ರಾತ್ರಿ ಊಟದೊಂದಿಗೆ ಕರಿದ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಇಲ್ಲದಿದ್ದರೆ, ಕೊಬ್ಬಿನ ಶೇಖರಣೆಯಿಂದ ತೂಕ ಇಳಿಕೆ ಬದಲಿಗೆ ತೂಕ ಹೆಚ್ಚಾಗಬಹುದು. 

ರಾತ್ರಿ ಊಟದಲ್ಲಿ ಸಿಹಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ, ನಿಮ್ಮ ತೂಕ ಮೊದಲಿಗಿಂತಲೂ ಹೆಚ್ಚಾಗಬಹುದು. 

ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ, ರಾತ್ರಿ ವೇಳೆ ಇವುಗಳ ಸೇವನೆಯು ದೇಹದಲ್ಲಿ ಲ್ಯಾಕ್ಟೋಸ್ ಮತ್ತು ನೈಸರ್ಗಿಕ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link