High Uric Acid: ಔಷಧಿಗಳಿಲ್ಲದೆ ಯೂರಿಕ್ ಆಸಿಡ್ ನಿಯಂತ್ರಿಸಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು
ಇತ್ತೀಚಿನ ದಿನಗಳಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಬಹಳ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಇದು ಕೀಳುಗಳಲ್ಲಿ ತೀವ್ರವಾದ ನೋವಿಗೆ ಕಾರಣವಾಗುತ್ತದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಬಹುದು. ಅಂತಹ ಹಣ್ಣುಗಳೆಂದರೆ...
ಎಲ್ಲಾ ಋತುವಿನಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಬಾಳೆಹಣ್ಣಿನಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು.
ಯೂರಿಕ್ ಆಸಿಡ್ ನಿಂದಾಗಿ ನೀವು ಕೀಲು ನೋವಿನಿಂದ ಬಳಲುತ್ತಿದ್ದರೆ ನೀವು ಚೆರ್ರಿಗಳು, ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳನ್ನು ತಿನ್ನಬಹುದು. ಬೆರ್ರಿಗಳಲ್ಲಿ ಆಂಥೋಸಯಾನಿನ್ ಎಂಬ ಸಂಯುಕ್ತ ಕಂಡು ಬರುತ್ತದೆ. ಇದು ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಪರಿಣಾಮಕಾರಿ ಎನ್ನಲಾಗುತ್ತದೆ.
ತೂಕ ಇಳಿಕೆಗಾಗಿ ಹೆಚ್ಚು ಪ್ರಯೋಜನಕಾರಿ ಎನ್ನಲಾಗುವ ಗ್ರೀನ್ ಟೀಯಲ್ಲಿ ಕಂಡು ಬರುವ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಯೂರಿಕ್ ಆಸಿಡ್ ನಿಯಂತ್ರಕ್ಕೂ ವರದಾನವಿದ್ದಂತೆ ಎನ್ನಲಾಗುತ್ತದೆ.
ಫ್ರೆಂಚ್ ಬೀನ್ಸ್ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.