ಹೆಣ್ಣು ಮಕ್ಕಳ ಪೋಷಕರೀಗ ನಿರಾಳ ! ಜನನದಿಂದ ವಿವಾಹದವರೆಗೆ ಬೇಡವೇ ಬೇಡವೇ ಚಿಂತೆ ! ಸರ್ಕಾರ ನೀಡುತ್ತಿದೆ ಈ ಸ್ಕೀಮ್
ಹೆಣ್ಣು ಮಗುವಿನ ಶಿಕ್ಷಣ ಮತ್ತು ಇತರ ಯೋಗಕ್ಷೇಮಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಟಾಪ್ 5 ಯೋಜನೆಗಳ ಮಾಹಿತಿ ಇಲ್ಲಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ತೆರಿಗೆ ವಿನಾಯಿತಿ ನೀಡುವುದಲ್ಲದೆ, ಉತ್ತಮ ಬಡ್ಡಿದರಗಳನ್ನು ಕೂಡಾ ನೀಡುತ್ತವೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬ್ಯಾಂಕ್‌ಗಳಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.10 ವರ್ದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.ಈ ಖಾತೆಯ ಮೆಚ್ಯೂರಿಟಿ ಅವಧಿ 21 ವರ್ಷಗಳು, ಅಥವಾ ಹುಡುಗಿಯ ಮದುವೆಯಾಗುವವರೆಗೆ.ಇದರಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ವಾರ್ಷಿಕವಾಗಿ 7.6 ಶೇಕಡಾ ಬಡ್ಡಿದರ ಸಿಗುತ್ತದೆ.
ಫಲಾನುಭವಿ ವಿದ್ಯಾರ್ಥಿನಿ ಐಐಟಿ ಅಥವಾ ಎನ್‌ಐಟಿ ಅಥವಾ ಯಾವುದೇ ಕೇಂದ್ರೀಯ ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದರೆ ಮತ್ತು ಉಡಾನ್ ತರಗತಿಗಳಲ್ಲಿ ಕನಿಷ್ಠ 75% ಗಳಿಸಿದರೆ, ಅವರ ಬೋಧನಾ ಶುಲ್ಕಗಳು, ಪ್ರವೇಶ ಶುಲ್ಕಗಳು ಮತ್ತು ಹಾಸ್ಟೆಲ್ ಫೀಸ್ ವಿಷಯದಲ್ಲಿ ಹಣಕಾಸಿನ ನೆರವು ಸಿಗಲಿದೆ.
ಈ ಯೋಜನೆಯಲ್ಲಿ ಹೆಣ್ಣು ಮಗುವಿನ ಜನನ ನೋಂದಣಿಯ ವೇಳೆ 5,000 ರೂ. ನೀಡಲಾಗುವುದು.ನಂತರ ಶಿಶು ಅವಸ್ಥೆಯ ವಿವಿಧ ಹಂತಗಳಲ್ಲಿ 1,250 ರೂ. ಪಾವತಿಸಲಾಗುವುದು. ಶಾಲಾ ದಾಖಲಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಂಡಾಗ 3,500, 8 ನೇ ತರಗತಿವರೆಗಿನ ಮಾಧ್ಯಮಿಕ ಶಾಲಾ ದಾಖಲಾತಿ ವೇಳೆ 3,750, ಹೆಣ್ಣು ಮಗುವಿಗೆ 18 ವರ್ಷವಾದಾಗ 1 ಲಕ್ಷದ ವಿಮಾ ಮೆಚ್ಯೂರಿಟಿ ಕವರ್ ನೀಡಲಾಗುವುದು.
ಇಲ್ಲಿ ಹೆಣ್ಣು ಮಗು ಒಂಬತ್ತನೇ ತರಗತಿಗೆ ದಾಖಲಾದ ಮೇಲೆ 3000 ರೂ ಮೊತ್ತವನ್ನು ಅರ್ಹ ಅವಿವಾಹಿತ ಹುಡುಗಿಯರ ಹೆಸರಿನಲ್ಲಿ ಸ್ಥಿರ ಠೇವಣಿ ಮಾಡಲಾಗುತ್ತದೆ.ಆ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಮತ್ತು 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಬಡ್ಡಿಯೊಂದಿಗೆ ನೀಡಲಾಗುವುದು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುತ್ತದೆ.BPL ಕುಟುಂಬಗಳ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಿಗೆ 500/- ರೂ ನೀಡಲಾಗುವುದು.