Diet for Strong Bones: ಸದೃಢ ಮೂಳೆಗಾಗಿ ಡಯಟ್ ನಲ್ಲಿ ಸೇವಿಸಿ ಈ ಆಹಾರ
ಮೂಳೆಗಳು ದುರ್ಬಲವಾಗಿದ್ದರೆ ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳು ಎದುರಾಗಬಹುದು. ಈ ರೋಗಗಳಿದ್ದರೆ , ಸಣ್ಣ ಏಟಾದರೂ ಮೂಳೆ ಮುರಿತದ ಅಪಾಯವಿರುತ್ತದೆ. ಆದ್ದರಿಂದ, ನಿಮ್ಮ ಮೂಳೆಗಳು ಆರೋಗ್ಯಕರವಾಗಿ ಬಲಿಷ್ಟವಾಗಬೇಕಾದರೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ತೆಗೆದುಕೊಳ್ಳಬೇಕು.
ಮೊಸರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡರ ಅತ್ಯುತ್ತಮ ಮೂಲವಾಗಿದೆ. ಮೊಸರು ತಿನ್ನುವುದರಿಂದ ಮೂಳೆ ಬಲಿಷ್ಟವಾಗಿರುತ್ತದೆ. ಪ್ರತಿ ದಿನ ಮೊಸರು ಸೇವಿಸುವುದರಿಂದ ಮೂಳೆ ಮುರಿತದ ಆಪಾಯ ಕಡಿಮೆಯಾಗುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಸೇರಿಸಿ.
ಮೊಟ್ಟೆ ಪ್ರಿಯರಿಗೆ ಇದು ಒಳ್ಳೆಯ ಸುದ್ದಿ. ಮೊಟ್ಟೆಗಳಲ್ಲಿ ವಿಟಮಿನ್ ಡಿ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗವು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಒಂದು ವೇಳೆ ನೀವು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಿದರೆ, ವಿಟಮಿನ್ ಡಿ ನಿಮ್ಮ ದೇಹ ಸೇರುವುದಿಲ್ಲ. ಹಾಗಿ ಬೇಯಿಸಿದ ಮೊಟ್ಟೆ ತಿನ್ನುವಾಗ ಹಳದಿ ಭಾಗದ ಸಮೇತ ಸೇವಿಸಿ.
ಪಾಲಕದಂತಹ ಹಸಿರು ಸೊಪ್ಪು ತರಕಾರಿಗಳು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ. 1 ಕಪ್ ಪಾಲಕ್ ದೈನಂದಿನ ಕ್ಯಾಲ್ಸಿಯಂ ಅಗತ್ಯದ ಶೇಕಡಾ 25 ರಷ್ಟು ಪ್ರಮಾಣವನ್ನು ಹೊಂದಿರುತ್ತದೆ. ಇದಲ್ಲದೆ, ಪಾಲಕ್ ನಲ್ಲಿ ಕಬ್ಬಿಣ ಮತ್ತು ವಿಟಮಿನ್ ಎ ಇದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಪಾಲಕ್ ಅನ್ನು ಖಂಡಿತವಾಗಿ ಸೇವಿಸಿ.
ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್ ಕೂಡ ಬಹಳ ಮುಖ್ಯ. ಎಲುಬುಗಳಲ್ಲಿ 50 ಪ್ರತಿಶತ ಪ್ರೋಟೀನ್‌ನಿಂದ ಕೂಡಿದೆ. ದೇಹದಲ್ಲಿ ಪ್ರೋಟೀನ್ ಅಂಶ ಕಡಿಮೆಯಾದರೆ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕೂಡಾ ಕಡಿಮೆಯಾಗುತ್ತದೆ. ಇದರಿಂದ ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಆಹಾರದಲ್ಲಿ ಬಾದಾಮಿ, ಓಟ್ಸ್, ಪನೀರ್, ಹಾಲು, ಕೋಸುಗಡ್ಡೆ ಮುಂತಾದವುಗಳನ್ನು ಹೇರಳವಾಗಿ ಸೇವಿಸಿ .