ಚಳಿಗಾಲದಲ್ಲಿ ಶ್ವಾಸಕೋಶವನ್ನು ಆರೋಗ್ಯವಾಗಿಡಲು ನಿತ್ಯ ಸೇವಿಸಿ ಈ ಜ್ಯೂಸ್
ಹಸಿರು-ಎಲೆ ತರಕಾರಿಗಳ ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನು ಬಳಸಿಕೊಂಡು ಜ್ಯೂಸ್ ಮಾಡಿದರೆ ಇದು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಬೀಟ್ ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಶ್ವಾಸಕೋಶದ ಕಲ್ಮಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಬೀಟ್ ರೂಟ್ ನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯವಾದ ಪೋಷಕಾಂಶಗಳು ಅಡಗಿವೆ. ಈ ಕಾರಣದಿಂದಾಗಿ, ಶ್ವಾಸಕೋಶದ ಕಾರ್ಯವನ್ನು ಉತ್ತಮಗೊಳಿಸುತ್ತವೆ.
ಆಪಲ್ ಜ್ಯೂಸ್ ಶ್ವಾಸಕೋಶಕ್ಕೆ ಬಹಳ ಮುಖ್ಯ. ಇದು ಅನೇಕ ಪೋಷಕಾಂಶಗಳಿಂದ ಕೂಡಿದೆ. ಸೇಬು ಹಣ್ಣು ವಿಟಮಿನ್ ಎ, ಆಂಟಿಆಕ್ಸಿಡೆಂಟ್ ಕ್ವೆರ್ಸೆಟಿನ್ ನ ಉತ್ತಮ ಮೂಲವಾಗಿದೆ. ಇದರಿಂದಾಗಿ ಇದು ಶ್ವಾಸಕೋಶಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ
ಕುಂಬಳಕಾಯಿ ರಸವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಉಸಿರಾಟದ ಸಮಸ್ಯೆಯಿದ್ದರೆ, ಪ್ರತಿದಿನ ಕುಂಬಳಕಾಯಿ ರಸವನ್ನು ಸೇವಿಸಬೇಕು.
ಟೊಮೆಟೊ ಹಣ್ಣು ಕೂಡಾ ಅಪಾರ ಪ್ರಮಾಣದ ಪೋಷಕಾಂಶವನ್ನು ಹೊಂದಿದೆ. ಇದು ಉರಿಯೂತವನ್ನು ತೆಗೆದುಹಾಕಲು ಮತ್ತು ಉಸಿರಾಟದ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಟೊಮೆಟೊ ರಸವನ್ನು ಸೇವಿಸಿದರೆ, ಶ್ವಾಸಕೋಶದ ಹಾನಿಯನ್ನು ಕಡಿಮೆ ಮಾಡಬಹುದು.