ಟೀಂ ಇಂಡಿಯಾದ ಈ ದಿಗ್ಗಜ್ಜರಿಗೆ ಇದು ಕೊನೆಯ ವಿಶ್ವ ಕಪ್ ! ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ !
36 ವರ್ಷ ವಯಸ್ಸಿನ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬಹುಶಃ ಈ ವರ್ಷ ತಮ್ಮ ಕೊನೆಯ ವಿಶ್ವಕಪ್ ಪಂದ್ಯ ಆಡಲಿದ್ದಾರೆ. ಇದಾದ ಬಳಿಕ ಮುಂದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಆಗ ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗುತ್ತದೆ. ಈ ವಯಸ್ಸಿನಲ್ಲಿ ಆಡುವುದು ರೋಹಿತ್ ಶರ್ಮಾಗೆ ದೊಡ್ಡ ಸವಾಲಾಗಿರಲಿದೆ.
32 ವರ್ಷದ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಶಮಿಗೂ ಬಹುಶಃ ಇದು ಕೊನೆಯ ವಿಶ್ವಕಪ್ . ಮುಂದಿನ ವಿಶ್ವಕಪ್ ವೇಳೆ ಮೊಹಮ್ಮದ್ ಶಮಿಯ ವಯಸ್ಸು 36 ವರ್ಷಆಗಿರಲಿದೆ. ಫಾಸ್ಟ್ ಬೌಲರ್‌ಗೆ ಈ ವಯಸ್ಸಿನಲ್ಲಿ ಆಡುವುದೇ ದೊಡ್ಡ ಸವಾಲು.
36 ವರ್ಷದ ಭಾರತೀಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬಹುಶಃ ಈ ವರ್ಷ ತಮ್ಮ ಕೊನೆಯ ವಿಶ್ವಕಪ್ ಟೂರ್ನಿಯನ್ನು ಆಡಲಿದ್ದಾರೆ. ಮುಂದಿನ ವಿಶ್ವ ಕಪ್ ವೇಳೆ ಆರ್ ಅಶ್ವಿನ್ ಗೆ 40 ವರ್ಷ. 40 ವರ್ಷ ವಯಸ್ಸಿನಲ್ಲಿ ಆಡುವುದು ಸುಲಭವಾಗಿರುವುದಿಲ್ಲ.
34 ವರ್ಷದ ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾಗೂ ಬಹುಶಃ ಇದು ಕೊನೆಯ ವಿಶ್ವ ಕಪ್. ಯಾಕೆಂದರೆ ಮುಂದಿನ ವಿಶ್ವಕಪ್ ವೇಳೆ ಅಂದರೆ ತನ್ನ 38 ನೇ ವಯಸ್ಸಿನಲ್ಲಿ ಆಡುವುದು ರವೀಂದ್ರ ಜಡೇಜಾಗೆ ದೊಡ್ಡ ಸವಾಲಾಗಿರಲಿದೆ.
33 ವರ್ಷದ ಭಾರತೀಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡಾ ಬಹುಶಃ ಈ ವರ್ಷ ತಮ್ಮ ಕೊನೆಯ ವಿಶ್ವಕಪ್ ಪಂದ್ಯಾವಳಿಯನ್ನು ಆಡಲಿದ್ದಾರೆ. ಮುಂದಿನ ವಿಶ್ವಕಪ್ ವೇಳೆ ಅವರಿಗೆ 37 ವರ್ಷ ವಯಸ್ಸಾಗಿರಲಿದೆ. ಫಾಸ್ಟ್ ಬೌಲರ್ ಈ ವಯಸ್ಸಿನಲ್ಲಿ ಆಡುವುದು ಸ್ವಲ್ಪ ಕಷ್ಟ.