Black Salt Benefits: ಈ ಎಲ್ಲಾ ಕಾರಣಗಳಿಗಾಗಿ ಅಡುಗೆಯಲ್ಲಿ ಬಳಸಿ Black Salt
ಪಿತ್ತಜನಕಾಂಗದಲ್ಲಿನ ಪಿತ್ತರಸ ಉತ್ಪಾದನೆಯನ್ನು ಹೆಚ್ಚಿಸಲು ಬ್ಲಾಕ್ ಸಾಲ್ಟ್ ಸಹಾಯ ಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ. ಆಸಿಡಿಟಿಯಿಂದಾಗಿ ಎದೆಯುರಿ ಅಥವಾ ಹೊಟ್ಟೆ ಉಬ್ಬರಿಸುವ ಸಮಸ್ಯೆ ಎದುರಿಸುತ್ತಿದ್ದರೆ, ಇದರ ನಿವಾರಣೆಗೆ ಬ್ಲಾಕ್ ಸಾಲ್ಟ್ ಸಹಾಯ ಮಾಡುತ್ತದೆ. ಬ್ಲಾಕ್ ಸಾಲ್ಟ್ ನಲ್ಲಿರುವ ಸೋಡಿಯಂ ಕ್ಲೋರೈಡ್ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಬಿಪಿ ಕಾಯಿಲೆ ಹೊಂದಿರುವವರಿಗೆ ಬಿಳಿ ಉಪ್ಪಿನ ಬದಲು Black Salt ಬಳಸುವಂತೆ ಸೂಚಿಸಲಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಎಷ್ಟು ಪ್ರಮಾಣದಲ್ಲಿ ಈ ಬ್ಲಾಕ್ ಸಾಲ್ಟ್ ಸೇವಿಸಬಹುದು ಎನುವುದನ್ನು ಬಿಪಿ ರೋಗಿಗಳು ವೈದ್ಯರ ಸಲಹೆ ಮೂಲಕ ತಿಳಿದುಕೊಳ್ಳಬೇಕು.
ನಿದ್ರಾಹೀನತೆಯನ್ನು ಹೋಗಲಾಡಿಸಲು ಬ್ಲಾಕ್ ಸಾಲ್ಟ್ ಸಹಾಯ ಮಾಡುತ್ತದೆ. ಮೆಲಟೋನಿನ್ ಅಸಮತೋಲನದಿಂದಾಗಿ ಅನೇಕರಿಗೆ ರಾತ್ರಿ ಸರಿಯಾಗಿ ನಿದ್ದೆ ಸಮಸ್ಯೆಯನ್ನು ಎದುರಿಸುತ್ತಾರೆ. ರಾತ್ರಿ ಊಟದಲ್ಲಿ ಬ್ಲಾಕ್ ಸಾಲ್ಟ್ ಸಿಂಪಡಿಸುವ ಮೂಲಕ ಮೆಲಟೋನಿನ್ ಪ್ರಮಾಣವನ್ನು ಹೆಚ್ಚಿಸಬಹುದು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.
ಒಟ್ಟು ಉಪ್ಪಿನಂಶದ ನಾಲ್ಕನೇ ಒಂದು ಭಾಗ ನಮ್ಮ ಮೂಳೆಗಳಲ್ಲಿ ಸಂಗ್ರಹವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಆಸ್ಟಿಯೊಪೊರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ನಿಮ್ಮ ಆಹಾರದಲ್ಲಿ ಬ್ಲಾಕ್ ಸಾಲ್ಟ್ ಸೇರಿಸಬೇಕು. ಇದು ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯುತ್ತದೆ.
ಬಿಸಿಸ್ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಹಾಕಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ನೀರಿಗೆ ಒಂದು ಚಿಟಿಕೆ ಬ್ಲಾಕ್ ಸಾಲ್ಟ್ ಸೇರಿಸಿದರೆ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ.