WhatsApp ಪಿನ್ ಮರೆತಿದ್ದೀರಾ? ಇಲ್ಲಿದೆ ಪರಿಹಾರ
ನೀವು ನಿಮ್ಮ ವಾಟ್ಸಾಪ್ ಪಿನ್ ಅನ್ನು ಮರೆತಿದ್ದೀರಾ? ಈಗ ವಾಟ್ಸಾಪ್ ತೆರೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ?
ಸಾಮಾನ್ಯವಾಗಿ, ಎಲೆಕ್ಟ್ರಿಕ್ ಸಾಧನಗಳಲ್ಲಿ, ಅಪ್ಲಿಕೇಷನ್ ಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಾವು ಪಿನ್ ಹೊಂದಿಸುತ್ತೇವೆ. ಆದರೆ, ದುರದೃಷ್ಟವಶಾತ್ ಕೆಲವೊಮ್ಮೆ ಆ ಪಿನ್ ಅನ್ನು ಮರೆತಿರುತ್ತೇವೆ. ಪ್ರತಿಯೊಬ್ಬರೂ ಕೂಡ ಒಂದಲ್ಲಾ ಒಂದು ಸಮಯದಲ್ಲಿ ಇಂತಹ ಸಂದರ್ಭವನ್ನು ಎದುರಿಸಿರುತ್ತಾರೆ. ವಾಟ್ಸಾಪ್ ಪಿನ್ ಕೂಡ ಇದಕ್ಕೆ ಹೊರತಾಗಿರುವುದಿಲ್ಲ. ನೀವೂ ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ, ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವಾಟ್ಸಾಪ್ ಪಿನ್ ಅನ್ನು ಮರು ಹೊಂದಿಸಬಹುದು.
ನೀವು ವಾಟ್ಸಾಪ್ ಪಿನ್ ಸೆಟ್ ಮಾಡುವಾಗ ಟು-ವೇ-ವೇರಿಫಿಕೇಷನ್ ಹೊಂದಿಸಿದ್ದರೆ ನೀವು ಪಿನ್/ಪಾಸ್ವರ್ಡ್ ಮರೆತಿದ್ದರೆ ಅದನ್ನು ಮರು ಹೊಂದಿಸುವುದು ತುಂಬಾ ಸುಲಭ.
ನೀವು ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿದಾಗ ನಿಮ್ಮ ಇಮೇಲ್ ಸಹಾಯದಿಂದ ವಾಟ್ಸಾಪ್ ಪಿನ್ ಮರುಹೊಂದಿಸಲು ದೃಢೀಕರಣಕ್ಕಾಗಿ ನಿಮ್ಮ ಇಮೇಲ್ ಐಡಿ ಅನ್ನು ನಮೂದಿಸಿ. ಬಳಿಕ, ನಿಮ್ಮ ಇಮೇಲ್ ನಲ್ಲಿ ಬರುವ ಇತ್ತೀಚಿನ ಲಿಂಕ್ ಅನುಸರಿಸಿ ದೃಢೀಕರಿಸಿ.
ನೀವು ಒಮ್ಮೆ ಟು-ವೇ-ವೇರಿಫಿಕೇಷನ್ ಸೆಟ್ ಮಾಡಿದರೆ ಅದು ಎಂದಿಗೂ ಕೂಡ ಸ್ವಯಂ ಚಾಲಿತವಾಗಿ ಆಫ್ ಆಗುವುದಿಲ್ಲ.