ಸೌತ್‌ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್‌ ವಾರ್ನರ್‌ ದೊಡ್ಡ ಅಭಿಮಾನಿ..!ಆ ಸ್ಟಾರ್‌ ಯಾರು ಗೊತ್ತಾ..?

Sat, 10 Aug 2024-7:44 am,

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ  ಆಕ್ಷನ್‌ ಕಟ್‌ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ. 

ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದೊಂದು ಪ್ಯಾನ್ ವರ್ಲ್ಡ್ ಅಡ್ವೆಂಚರ್ ಸಿನಿಮಾ. 80 ರಷ್ಟು ಚಿತ್ರೀಕರಣ ಅಮೆಜಾನ್ ಅರಣ್ಯದಲ್ಲಿ ನಡೆಯಲಿದೆ ಎಂದು ಘಟಕವು ಈಗಾಗಲೇ ಬಹಿರಂಗಪಡಿಸಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಸೆಟ್‌ಗೆ ಹೋಗಲಿದೆ.  

ಈ ಚಿತ್ರಕ್ಕಾಗಿ ಮಹೇಶ್ ಬಾಬು ವಿಶೇಷ ತರಬೇತಿ ಪಡೆಯುತ್ತಿರುವುದು ಅಷ್ಟೆ ಅಲ್ಲದೆ ತನ್ನ ಲುಕ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಹಿಂದೆಂದೂ ಕಾಣದಷ್ಟು ಗಡ್ಡ, ಕೂದಲು ಬೆಳೆಸಿರುವ ಮಹೇಶ್ ಬಾಬು ಅವರ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.   

ಆರ್‌ಆರ್‌ಆರ್ ನಂತರ, ರಾಜಮೌಳಿ ನಿರ್ದೇಶನದ ಮತ್ತು ಮಹೇಶ್ ಕಾಂಬೊದಲ್ಲಿ ಬರುತ್ತಿರುವ ಚಿತ್ರವು ಅದರ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ. ಇದನ್ನು ಪ್ರತಿಷ್ಠಿತವಾಗಿ ತೆರೆಗೆ ತರಲು ರಾಜಮೌಳಿ ಸಿದ್ಧತೆ ನಡೆಸಿದ್ದಾರೆ. ಚಿತ್ರಕ್ಕೆ ನೆವರ್ ಬಿಫೋರ್(Never Before) ಎಂದು ಹೆಸರಿಡಲಿದ್ದೇವೆ ಎಂದು ರಾಜಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.  

ಆಗಸ್ಟ್‌ 09ರಂದು ಮಹೇಶ್‌ ಬಾಬು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮಹೇಶ್ ಬಾಬು ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಪೋಸ್ಟ್‌ ಕಂಡ ಅಭಿಮಾನಿಗಲ ಕಾಮೆಂಟ್‌ಗಲ ಸುರಿಮಳೆ ಹರಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link