BBK 10: ಫಿನಾಲೆಗೆ ದಿನಗಣನೆ ಬೆನ್ನಲ್ಲೇ ವಿನ್ನರ್ ಹೆಸರು ರಿವೀಲ್! ಹೈ ಸ್ಪೀಡ್’ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಸ್ಪರ್ಧಿಗೆ ‘ಬಿಗ್ ಬಾಸ್’ ವಿಜೇತ ಪಟ್ಟ!
ಅಕ್ಟೋಬರ್ 8, 2023ರಂದು ಹ್ಯಾಪಿ ಬಿಗ್ ಬಾಸ್ ಎಂಬ ಟ್ಯಾಗ್ ಲೈನ್ ಮೂಲಕ ಪ್ರಾರಂಭಗೊಂಡ ಬಿಗ್ ಬಾಸ್ ಕನ್ನಡ ಸೀಸನ್ 10 ಹಲವಾರು ಏರಿಳಿತಗಳನ್ನು ಕಂಡಿತ್ತು.
ಅಂದಹಾಗೆ ಈ ಸೀಸನ್ ಅತಿ ಹೆಚ್ಚು ಟಿಆರ್’ಪಿ ರೇಟಿಂಗ್ ಪಡೆದು ಟ್ರೆಂಡಿಂಗ್’ನಲ್ಲಿ ಇತ್ತು. ಇದೀಗ 10ನೇ ಸೀಸನ್ ಮುಕ್ತಾಯದ ಹಂತದಲ್ಲಿದೆ. ಇನ್ನೇನು ಎರಡು ಮೂರು ದಿನಗಳಲ್ಲಿ ಫಿನಾಲೆ ವೀಕ್ ಬಂದೇ ಬಿಡುತ್ತದೆ.
ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹೆಸರು ಭಾರೀ ವೈರಲ್ ಆಗುತ್ತಿದ್ದು, ಪುರುಷ ಸ್ಪರ್ಧಿಗಳನ್ನು ಹಿಂದಿಕ್ಕಿ ಮಹಿಳಾ ಸ್ಪರ್ಧಿಯೊಬ್ಬರು ವಿನ್ನರ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಪರ್ಧಿ ಬೇರಾರು ಅಲ್ಲ, ಸಂಗೀತಾ ಶೃಂಗೇರಿ.
ಬಿಗ್ ಬಾಸ್ ಪಟ್ಟ ಗೆಲ್ಲೋದಕ್ಕೆ ಅರ್ಹತೆ ಇರುವ ಸ್ಪರ್ಧಿಗಳಲ್ಲಿ ಸಂಗೀತಾ ಕೂಡ ಒಬ್ಬರು. ಆಟದಲ್ಲೂ, ಮಾತಿನಲ್ಲೂ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸುತ್ತಾ ಆಟವಾಡುತ್ತಿರುವ ಸಂಗೀತಾ ಈ ಬಾರಿಯ ಟೈಟಲ್ ವಿನ್ನರ್ ಆಗುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ ಮಾಜಿ ಬಿಗ್ ಬಾಸ್ ರನ್ನರ್ ಅಪ್ ಕಿರಿಕ್ ಕೀರ್ತಿ ಕೂಡ, “ಈ ಬಾರಿ ಇವರೇ ವಿನ್ನರ್ ಅನಿಸುತ್ತದೆ #MUSIC” ಎಂದು ಬರೆದುಕೊಂಡಿದ್ದರು. ಮ್ಯೂಸಿಕ್ ಎಂದರೆ ಕನ್ನಡದಲ್ಲಿ ಸಂಗೀತಾ ಎಂದರ್ಥ.
ಇದಷ್ಟೇ ಅಲ್ಲದೆ, ಈ ಹಿಂದೆ ಕಾರ್ತಿಕ್ ಮತ್ತು ತನಿಷಾರನ್ನು ತೆಗಳಿ, ವಿನಯ್ ಅವರನ್ನು ಹೊಗಳಿದ್ದ ಸಂಗೀತಾ ಒಂದೇ ಬಾರಿಗೆ ಸುಮಾರು 13 ಸಾವಿರದಷ್ಟು ಫಾಲೋವರ್ಸ್’ಗಳನ್ನು ಕಳೆದುಕೊಂಡಿದ್ದರು. ಆದರೆ ಅದಾದ ಬಳಿಕ ತಮ್ಮ ಸ್ವಂತಿಕೆಯನ್ನು ಕಾಪಾಡಿಕೊಂಡು ಆಟವಾಡಿದ ಅವರು, ಮತ್ತೆ ಜನರ ಮನಗೆದ್ದರು, ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿದ ಸ್ಪರ್ಧಿಗಳಲ್ಲಿ ಒಬ್ಬರಾದರು.
ಸಂಗೀತಾ ಈ ಬಾರಿ ಬಿಗ್ ಬಾಸ್ ಪಟ್ಟ ಗೆಲ್ಲುವ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ.