ಪ್ರೀತಿಸಿ ಮದುವೆಯಾಗಿ ಮಗುವಾಗಿದ್ರೂ ನಟಿಯ ಜೊತೆ ಡೇಟಿಂಗ್! ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟೀಂ ಇಂಡಿಯಾದ ಅಗ್ರೆಸ್ಸಿವ್‌ ಕ್ಯಾಪ್ಟನ್‌ ಈತ!

Thu, 22 Aug 2024-2:36 pm,

 ಬಾಲಿವುಡ್‌ ಬ್ಯೂಟಿಯರ ಅಂದಕ್ಕೆ ಅದೆಷ್ಟೋ ಕ್ರಿಕೆಟ್‌ ಸ್ಟಾರ್‌ʼಗಳು ಮರುಳಾಗಿದ್ದಾರೆ ಎಂಬುದು ತಿಳಿದ ವಿಚಾರವೇ. ಅದರಲ್ಲಿ ಕೆಲವರು ಪ್ರೀತಿಸಿ ಮದುವೆಯಾಗಿದ್ದರೆ, ಇನ್ನೂ ಕೆಲವರು ಬ್ರೇಕಪ್‌ ಮಾಡಿಕೊಂಡು ದೂರವಾಗಿದ್ದಾರೆ. ಅಂತಹ ವಿಚಾರಗಳಲ್ಲಿ ಸೌರವ್‌ ಗಂಗೂಲಿ ವಿಚಾರವೇ ವಿಭಿನ್ನವಾಗಿ ನಿಲ್ಲುತ್ತದೆ.

 

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಸೌರವ್ ಗಂಗೂಲಿ- ನಟಿ ನಗ್ಮಾ ನಡುವಿನ ಸಂಬಂಧದ ಬಗ್ಗೆ ಒಂದಷ್ಟು ಕಾಲ ಭಾರೀ ಸುದ್ದಿ ಹರಿದಾಡಿದ್ದವು.

 

1999ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ಗಂಗೂಲಿಗೆ, ನಟಿ ನಗ್ಮಾ ಮೇಲೆ ಪ್ರೇಮಾಂಕುರವಾಗಿತ್ತು ಎಂಬ ವದಂತಿ ಹರಿದಾಡಿತ್ತು. ಆದರೆ ಈ ವಿಚಾರ ಮತ್ತಷ್ಟು ಗಲಿಬಿಲಿಗೆ ಕಾರಣವಾಗಿದ್ದು ಏಕೆಂದರೆ, ಗಂಗೂಲಿ ಅದಾಗಲೇ ಡೋನಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು.

 

ನಟಿ ನಗ್ಮಾ ಮತ್ತು ಗಂಗೂಲಿ ರಹಸ್ಯವಾಗಿ ಮದುವೆಯಾಗಲಿದ್ದಾರೆ. ದೇವಾಲಯಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳು ಹರಿದಾಡಿದವು. ಡೋನಾ, ಸೌರವ್ ಗಂಗೂಲಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಮತ್ತೊಂದೆಡೆ ಬಿಸಿ ವಿಷಯವಾಗಿತ್ತು.

 

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ, ನಗ್ಮಾ ಪ್ರಮುಖ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದರು. ಆ ಸಂದರ್ಭದಲ್ಲಿ ಗಂಗೂಲಿ ಜತೆಗಿನ ಸಂಬಂಧದ ಬಗ್ಗೆ ಪ್ರಸ್ತಾಪಿಸಿ, ವದಂತಿ ನಿಜ ಎಂದು ಹೇಳಿದ್ದರು. ಆದರೆ ಅವರಿಬ್ಬರ ನಡುವೆ ಬ್ರೇಕಪ್‌ ಆಗಲು ಕಾರಣವೇನೆಂದು ಸಹ ಹೇಳಿಕೆ ನೀಡಿದ್ದರು. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಇಂದಿಗೂ ಇದೆ.

 

ಇನ್ನು ಮಾಧ್ಯಮಗಳಲ್ಲಿ ಇವರಿಬ್ಬರ ಬಗ್ಗೆ ಹರಿದಾಡುತ್ತಿರುವ ಸುದ್ದಿ ತಿಳಿದ ಡೋನಾ ಮನಸ್ಸು ಮುರಿದುಹೋಗಿತ್ತು. ಗಂಡನನ್ನು ಬಿಟ್ಟು ಹೊರಡಬೇಕೆಂದು ನಿರ್ಧರಿಸಿದ್ದರು. ಆದರೆ ಕಡೆಗೆ ಹೇಗಾದರೂ ಸಂಸಾರವನ್ನು ಕಾಪಾಡಿಕೊಳ್ಳಲೇಬೇಕೆಂದುಕೊಂಡು ತಾವೇ ಮುಂದೆ ನಿಂತು, ಗಂಗೂಲಿಯಿಂದ ನಗ್ಮಾಳನ್ನು ದೂರ ಮಾಡಿದ್ದರು ಡೋನಾ. ಇದೀಗ ಡೋನಾ ಜೊತೆ ಸೌರವ್‌ ಸುಖಜೀವನ ನಡೆಸುತ್ತಿದ್ದಾರೆ.

 

ಆದರೆ 1990ರಿಂದ ಬೆಳ್ಳಿತೆರೆಯಲ್ಲಿ ತಾರೆಯಾಗಿ ಕಾಣಿಸಿಕೊಂಡಿದ್ದ ನಗ್ಮಾ, 2008ರಲ್ಲಿ ನಟನೆಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೆ, ನಗ್ಮಾ, ಇಲ್ಲಿಯವರೆಗೆ ಒಂಟಿಯಾಗಿ ವಾಸಿಸುತ್ತಿದ್ದಾರೆ. 2020 ರಲ್ಲಿ ಗಂಗೂಲಿ ಅವರ ಜನ್ಮದಿನದಂದು ಟ್ವಿಟರ್ ಮೂಲಕ ನಗ್ಮಾ ಶುಭ ಹಾರೈಸಿದ್ದರು. ಈ ಟ್ವೀಟ್ ಅನ್ನು ಇದುವರೆಗೂ ಡಿಲೀಟ್ ಮಾಡಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link