ಮೊದಲ ಪತ್ನಿ ಪರ್ಮಿಷನ್ ಪಡೆದು... ತನಗಿಂತ 28 ವರ್ಷ ಕಿರಿಯ ಯುವತಿಯನ್ನು ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್! ಹನಿಮೂನ್ಗೋಸ್ಕರ ಕ್ರಿಕೆಟ್ಗೆ ಗುಡ್ಬೈ ಹೇಳಿದ ಆತ ಯಾರು ಗೊತ್ತೇ?
ವಿನೋದ್ ಕಾಂಬ್ಳಿ, ಜಾವಗಲ್ ಶ್ರೀನಾಥ್, ಮೊಹಮ್ಮದ್ ಅಜರುದ್ದೀನ್, ಯೋಗರಾಜ್ ಸಿಂಗ್, ದಿನೇಶ್ ಕಾರ್ತಿಕ್ ಹೀಗೆ ಹಲವು ಕ್ರಿಕೆಟಿಗರು ಎರಡು ಮದುವೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟಿಗ ಪತ್ನಿ ಬದುಕಿದ್ದಾಗಲೇ, ತನಗಿಂತ 28 ವರ್ಷ ಕಿರಿಯ ಯುವತಿಯನ್ನು ವಿವಾಹವಾಗಿದ್ದಾರ
ಅಷ್ಟಕ್ಕೂ ಅವರು ಬೇರಾರು ಅಲ್ಲ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅರುಣ್ ಲಾಲ್. ಇವರು 2022 ರಲ್ಲಿ ತನಗಿಂತ 28 ವರ್ಷ ಚಿಕ್ಕ ಹುಡುಗಿಯನ್ನು ವಿವಾಹವಾದರು. ಅವರ ಪತ್ನಿಯ ಹೆಸರು ಬುಲ್ಬುಲ್ ಸಹಾ. ಇಬ್ಬರೂ ಬಹಳ ದಿನಗಳಿಂದ ಪರಿಚಯವಿದ್ದು ನಂತರ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಅರುಣ್ ಅವರ ಮೊದಲ ಹೆಂಡತಿಯ ಬಗ್ಗೆ ಮಾತನಾಡುವುದಾದರೆ, ಇವರ ಹೆಸರು ರೀನಾ. ಕೆಲ ವರ್ಷಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ಅರುಣ್ ಎರಡನೇ ಮದುವೆಯಾಗಲು ಯೋಚಿಸಿದ್ದರು. ಈ ಮದುವೆಗೂ ಮುನ್ನ ಅರುಣ್ ಮಾಜಿ ಪತ್ನಿಯಿಂದಲೂ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.
ಅವರ ಮದುವೆಯ ನಂತರ, ಅರುಣ್ ಲಾಲ್ ಅವರು ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ 2 ಜುಲೈ 2022 ರಂದು ಬಂಗಾಳ ರಣಜಿ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದರು. ಆ ಬಳಿಕ, ಹನಿಮೂನ್ ಹೋಗಲೆಂದು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು.
ಅರುಣ್ ಲಾಲ್ ಭಾರತದ ಪರ 16 ಟೆಸ್ಟ್ ಪಂದ್ಯಗಳು ಮತ್ತು 13 ODI ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಕ್ರಮವಾಗಿ 729 ಮತ್ತು 122 ರನ್ ಗಳಿಸಿದ್ದರು. ಟೆಸ್ಟ್ನಲ್ಲಿ ಅವರ ಗರಿಷ್ಠ ಸ್ಕೋರ್ 93 ಆಗಿದೆ. ಆದರೆ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗದ ಅರುಣ್, ಕೇವಲ 1 ಅರ್ಧಶತಕ ಬಾರಿಸಿದ್ದಾರೆ.