ಇಷ್ಟು ವರ್ಷವಾದ್ರೂ RCB ಕಪ್ ಗೆಲ್ಲದಿರಲು ಕಾರಣ ತಂಡದಲ್ಲಿರುವ ಈ ಕೆಟ್ಟ ಪದ್ಧತಿ! ತನ್ನದೇ ತಂಡದ ವಿರುದ್ಧ ಸ್ಟಾರ್ ಆಟಗಾರ ಕಿಡಿ
)
ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಪ್ರಸಿದ್ಧ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್’ಸಿಬಿ) ಬಗ್ಗೆ ಮಾತನಾಡಿದ್ದಾರೆ.
)
ಬೆಂಗಳೂರು ತಂಡದ ಕರಾಳ ಕಥೆಗಳನ್ನು ಬಿಚ್ಚಿಟ್ಟ ಪಾರ್ಥಿವ್, ತಂಡದಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ ಮತ್ತು ಇತರ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ ಎಂದು ಹೇಳಿದ್ದಾರೆ.
)
ಈ ಕಾರಣಗಳಿಂದಾಗಿ ತಂಡಕ್ಕೆ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಪಾರ್ಥಿವ್ ಅಭಿಪ್ರಾಯಪಟ್ಟಿದ್ದಾರೆ.
ಸೈರಸ್ ಸೇಸ್ ಪಾಡ್‌ಕಾಸ್ಟ್’ನಲ್ಲಿ ಮಾತನಾಡಿರುವ ಅವರು, “ತಂಡದ ಭಾಗವಾಗಿದ್ದಾಗ ಅಲ್ಲಿ ತಂಡದ ಸಂಸ್ಕೃತಿ ಇರಲಿಲ್ಲ. ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ ಮತ್ತು ಇತರ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ. ಈ ಎಲ್ಲ ಕಾರಣಗಳಿಂದ ತಂಡಕ್ಕೆ ಇಲ್ಲಿಯವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದಾರೆ.
"ನಾನು RCB ಪರ ಆಡಿದ್ದೇನೆ. ನಾನು ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಅಲ್ಲಿ ತಂಡವೆಂಬ ಸಂಸ್ಕೃತಿ ಇಲ್ಲ. ಅದಕ್ಕಾಗಿಯೇ ಇಲ್ಲಿಯವರೆಗೆ ಟ್ರೋಫಿಯನ್ನು ಗೆದ್ದಿಲ್ಲ” ಎಂದಿದ್ದಾರೆ.
RCB ಇಲ್ಲಿಯವರೆಗೆ ಒಂದೇ ಒಂದು IPL ಟ್ರೋಫಿಯನ್ನು ಗೆದ್ದಿಲ್ಲ. ಆದರೆ, ಇದರ ಹೊರತಾಗಿಯೂ ತಂಡಕ್ಕೆ ಅಪಾರ ಅಭಿಮಾನಿ ಬಳಗವಿದೆ. ಪ್ರತಿ ವರ್ಷ ತಂಡವು ಟ್ರೋಫಿ ಗೆಲ್ಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ, ಆದರೆ ಇದುವರೆಗೆ ಆಡಿದ 17 ಐಪಿಎಲ್ ಸೀಸನ್’ಗಳಲ್ಲಿ ಇದು ಸಂಭವಿಸಿಲ್ಲ.