ʼತತ್ಸಮ ತದ್ಭವʼ ಸೇರಿದಂತೆ ಇಂದು ನಾಲ್ಕು ಸಿನಿಮಾಗಳು ರಿಲೀಸ್‌

Fri, 15 Sep 2023-10:34 am,

ʼತತ್ಸಮ ತದ್ಭವʼ - ಕ್ರೈಮ್‌ ಥ್ರಿಲ್ಲರ್‌ ಕಥೆಯೊಂದಿಗೆ ಮೇಘನಾ ರಾಜ್‌ ಮತ್ತು ಪ್ರಜ್ವಲ್‌ ದೇವರಾಜ್‌ ನಟನೆಯ ʼತತ್ಸಮ ತದ್ಭವʼ ಇಂದು ತೆರೆ ಕಂಡಿದೆ. 

ʼ13ʼ - ರಾಘವೇಂದ್ರ ರಾಜಕುಮಾರ್‌ ಮತ್ತು ಶ್ರುತಿ ನಟನೆಯ ʼ13ʼ ಚಿತ್ರವು ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆಯ ಸ್ಪೂರ್ತಿಯಲ್ಲಿ ನಿರ್ದೇಶಕರು ಕಥೆಯನ್ನು ಹೆಣೆದಿದ್ದು ಇಂದು ತೆರೆ ಕಂಡಿದೆ.

ʼಪರಿಮಳ ಡಿಸೋಜʼ - ಇದೊಂದು ಕ್ರೈಮ್‌ ಥ್ರಿಲ್ಲರ್‌ ಕಥೆಯಾಗಿದ್ದು, ಗಿರಿಧರ್‌ ಎಚ್‌.ಟಿ ಅವರ ನಿರ್ದೇಶನದಲ್ಲಿ ಕೋಮಲ ಬನವಾಸೆ, ಭವ್ಯ, ಶ್ರೀನಿವಾಸ್‌ ಪ್ರಭು ಹಲವು ತಾರಾಗಣದೊಂದೆಗೆ ಸಿನಿಮಾ ಇಂದು ತೆರೆ ಕಂಡಿದೆ.

ʼಟೇಲ್ಸ್‌ ಆಫ್‌ ಮಹಾನಗರʼ - ʼಗೆಜ್ಜೆನಾದʼ ಖ್ಯಾತಿಯ ವಿಜಯ್‌ ಕುಮಾರ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಿರುತೆರೆಯಲ್ಲಿ ನಟಿಸಿರುವ ಅಥರ್ವ್‌ ಅವರ ಚೊಚ್ಚಲ ಸಿನಿಮಾ ಇದಾಗಿದೆ. ರೆಮೋಲ ಈ ಚಿತ್ರದ ನಾಯಕಿ ಸಿನಿಮಾ ಇಂದು ತೆರೆ ಕಂಡಿದೆ.

ಇಂದು(ಸೆ.15)ರಂದು ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿದ್ದು, ʼತತ್ಸಮ ತದ್ಭವʼ ವಿಭಿನ್ನ ರೀತಿಯಲ್ಲಿ ಮೇಘನಾ ನಟಿಸಿದ್ದು, ಪ್ರಜ್ವಲ್‌ ದೇವರಾಜ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ʼ13ʼ 23 ವರ್ಷಗಳ ನಂತರ ರಾಘವೇಂದ್ರ ರಾಜಕುಮಾರ್‌ ಮತ್ತು ಶ್ರುತಿ ನಟಿಸುತ್ತಿರುವ ಚಿತ್ರ ಇದಾಗಿದೆ. ʼಟೇಲ್ಸ್‌ ಆಫ್‌ ಮಹಾನಗರʼ ಈ ಚಿತ್ರದ ಫಸ್ಟ್‌ ಹಾಪ್‌ನಲ್ಲಿ ಮೂರು ಬೇರೆ ಕತೆಗಳಿದ್ದು, ಸೆಕೆಂಡ್‌ ಹಾಪ್‌ನಲ್ಲಿ ಮೂರು ಕತೆಗಳು ಒಂದಾಗುತ್ತವೆ. ʼಪರಿಮಳ ಡಿಸೋಜಾʼ ಕಥೆಯು ಪ್ರೇಮ, ಹಾಸ್ಯ, ಆಕ್ಷನ್‌, ಸಸ್ಪೆನ್ಸ್‌ ಮತ್ತು ಕ್ರೈಮ್‌ನ್ನು ಒಳಗೊಂಡಿರುವ ಚಿತ್ರ ಇದಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link