ಧನಲಕ್ಷ್ಮೀ ಯೋಗದಿಂದ ವರ್ಷಪೂರ್ತಿ ಅದೃಷ್ಟ ಕಾಣುವ ರಾಶಿಗಳಿವು !ಮನೆ, ವಾಹನ ಖರೀದಿ ಕನಸು ನಸಾಗುವುದು, ಉನ್ನತ ಸ್ಥನಾಕ್ಕೆ ಏರುವ ವರ್ಷವಿದು !
ಇಂದು ಚಂದ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರ ಮತ್ತು ಮಂಗಳ ಸಂಯೋಗದಿಂದ ಧನಲಕ್ಷ್ಮೀ ಯೋಗವು ರೂಪುಗೊಳ್ಳುತ್ತದೆ. ಜೊತೆಗೆ ಶನಿದೇವನು ಶಶ ರಾಜಯೋಗವನ್ನು ನಿರ್ಮಾಣ ಮಾಡುತ್ತಿದ್ದಾನೆ. ಮಂಗಳನು ಕರ್ಕಾಟಕದಲ್ಲಿ ನೆಲೆಸುವ ಮೂಲಕ ಧನ ಲಕ್ಷ್ಮಿ ರಾಜಯೋಗವನ್ನು ರೂಪಿಸುತ್ತಾನೆ. ಇದರೊಂದಿಗೆ ತ್ರಿಪುಷ್ಕರ ಯೋಗವೂ ರೂಪುಗೊಳ್ಳಲಿದೆ.
ಈ ಎಲ್ಲಾ ರಾಜಯೋಗಗಳ ಮೂಲಕ ವರ್ಷ ಪೂರ್ತಿ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಮನೆ ಮಾಡಲಿದೆ. ಈ ವರ್ಷ ಮನೆ ನಿರ್ಮಾಣ, ವಾಹನ ಖರೀದಿ,ಮತ್ತು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ವರ್ಷ ಇದಾಗಿರಲಿದೆ.
ಮೇಷ ರಾಶಿ : ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಮದುವೆಯಾಗದವರಿಗೆ ಮದುವೆ ನಿಶ್ಚಯವಾಗುವುದು. ವರ್ಷ ಪೂರ್ತಿ ಹಣದ ಹರಿವು ಹೆಚ್ಚಾಗುವುದು. ಹಣಕಾಸಿನ ಕೊರತೆ ಬರುವುದಿಲ್ಲ.
ಕನ್ಯಾರಾಶಿ : ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಆದಾಯದ ಮೂಲಗಳು ಹೆಚ್ಚಾಗುತ್ತವೆ.ಸಾಲದಿಂದ ಮುಕ್ತಿ ಪಡೆಯುವ ವರ್ಷ ಇದಾಗಲಿದೆ. ಮನೆ ನಿರ್ಮಾಣ, ವಾಹನ ಖರೀದಿ,ಮತ್ತು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ವರ್ಷ ಇದಾಗಿರಲಿದೆ.
ಕುಂಭ ರಾಶಿ : ವರ್ಷದ ಮೊದಲ ದಿನದಿಂದಲೇ ಅದೃಷ್ಟ ಬೆನ್ನ ಹಿಂದಿರುವುದು. ಅನಿರೀಕ್ಷಿತವಾಗಿ ಹಣ ಹರಿದು ಬರುವುದು.ಇಡೀ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಯಾಗುವುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಇಂದಿನಿಂದ ಮತ್ತೆ ಆರಂಭವಾಗಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.